ಮಂಗಳೂರು ಪೊಲೀಸ್ ಕಮೀಷನರ್ ಹರ್ಷ ವರ್ಗಾವಣೆ; ವಿಕಾಸ್ ಕುಮಾರ್ ನೂತನ ಕಮೀಷನರ್


ಮಂಗಳೂರು; ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ ಪಿ ಎಸ್ ಹರ್ಷ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ದೇಶದಾದ್ಯಂತ ಸುದ್ದಿಗೆ ಕಾರಣವಾಗಿದ್ದ ಮಂಗಳೂರು ಗೋಲಿಬಾರ್ ಪ್ರಕರಣ , ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಿದ ಪ್ರಕರಣ ಇವರ ಅವಧಿಯಲ್ಲಿ ನಡೆದಿತ್ತು. 
ಹರ್ಷ ಅವರನ್ನು  ವಾರ್ತಾ ಮತ್ತು ಪ್ರಚಾರ ಇಲಾಖೆಯ  ಡಿಐಜಿ ಮತ್ತು ಕಮೀಷನರ್ ಆಗಿ ನೇಮಿಸಲಾಗಿದೆ.
ಕಾರ್ಕಳ ಎ ಎನ್ ಎಫ್ ನಲ್ಲಿ  ಐಜಿಪಿ ಯಾಗಿದ್ದ ವಿಕಾಸ್ ಕುಮಾರ್ ವಿಕಾಸ್ ಅವರನ್ನು ಮಂಗಳೂರು ಪೊಲೀಸ್ ಕಮೀಷನರ್ ಆಗಿ ನೇಮಕಗೊಳಿಸಲಾಗಿದೆ.

Comments