ಚಿಂತನ ಸಾಂಸ್ಕೃತಿಕ ಬಳಗ ಮತ್ತು ಗೊಲ್ಲರಬೆಟ್ಟು ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ವನ ಮಹೋತ್ಸವ

ಚಿಂತನ ಸಾಂಸ್ಕೃತಿಕ ಬಳಗ ಮತ್ತು ಗೊಲ್ಲರಬೆಟ್ಟು ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಆಕಾಶಭವನದಲ್ಲಿ ಅಭಿಯಾನದಡಿ ವನ ಮಹೋತ್ಸವ ಕಾರ್ಯಕ್ರಮ ನಡೆಯಿತು. 

ಮೇಗಿನ ಮಾಲಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಮಲಾಕ್ಷ ಶೆಟ್ಟಿ ಹಾಗೂ ಕಾಪಿಗುಡ್ಡ ನ್ಯೂ ಫ್ರೆಂಡ್ಸ್ ಸರ್ಕಲ್‌ನ ಸ್ಥಾಪಕಾಧ್ಯಕ್ಷ ರಾಜೇಶ್ ದೇವಾಡಿಗ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಪ್ರಕೃತಿ ರಕ್ಷಣೆ, ಗ್ರೀನ್ ಮಂಗಳೂರು ಹಾಗೂ ಗಿಡ ನೆಡುವ ಮಹತ್ವದ ಬಗ್ಗೆ ಮಾತನಾಡಿದ ರಾಜೇಶ್ ದೇವಾಡಿಗ, ವನ ಮಹೋತ್ಸವ ಕಾಟಾಚಾರಕ್ಕೆ ನಡೆಯದೆ ನೆಟ್ಟ ಗಿಡಗಳ ರಕ್ಷಣೆ ಆಗಬೇಕು. ಪ್ರತಿ ಗಿಡಗಳು ಬೆಳೆದು ಮರವಾಗಬೇಕು. ಆಗಲೇ ಗ್ರೀನ್ ಮಂಗಳೂರು ಪರಿಕಲ್ಪನೆ ಸಾಕಾರವಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.

ಕಮಲಾಕ್ಷ ಶೆಟ್ಟಿ ಅವರೂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಔ‍ಷಧೀಯ ಸಸ್ಯಗಳು, ಫಲವಸ್ತುಗಳ ಅಪರೂಪದ ಗಿಡಗಳನ್ನು ಈ ಸಂದರ್ಭದಲ್ಲಿ ನೆಡಲಾಯಿತು.

ಚಿಂತನ ಸಾಂಸ್ಕೃತಿಕ ಬಳಗದ ಅಧ್ಯಕ್ಷರಾದ ಇಸ್ಮಾಯಿಲ್, ಮುಖ್ಯ ಸಂಯೋಜಕರಾದ ಪ್ರೇಮನಾಥ್ ಮರ್ಣೆ, ನ್ಯಾಯವಾದಿ ಸುಕೇಶ್ ಕುಮಾರ್, ಎ.ಜೆ. ಆಸ್ಪತ್ರೆಯ ರಾಜೇಶ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂಧ್ಯಾ ಪ್ರೇಮ್ ಸ್ವಾಗತಿಸಿ ಇಸ್ಮಾಯಿಲ್ ಧನ್ಯವಾದ ಸಮರ್ಪಿಸಿದರು.

Comments