ಚೀನಾ ಆ್ಯಪ್ ಬ್ಯಾನ್; ಐವನ್ ಡಿಸೋಜ ಹೇಳಿದ್ದು ಹೀಗೆ..
ಮಂಗಳೂರು: ಚೀನಾದ 59 ಆ್ಯಪ್​​​​ಗಳಿಗೆ ಕೇಂದ್ರ ಸರಕಾರ ನಿಷೇಧ ಹೇರಿರುವುದರಿಂದ ಗಡಿಯಲ್ಲಿ ಹತರಾದ 20 ಸೈನಿಕರಿಗೆ ಸಾಂತ್ವನ ಹೇಳಿದಂತಾಗುವುದಿಲ್ಲ ಎಂದು ಮಾಜಿ ಎಂಎಲ್ಸಿ ಐವನ್ ಡಿಸೋಜ ಹೇಳಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 59 ಚೈನಾ ಆ್ಯಪ್​​​ಗಳನ್ನು ಬ್ಯಾನ್ ಮಾಡಿದ್ದಾರೆ. ಆದರೆ ಚೀನಾ ತಯಾರಿಸಿದ ಮೊಬೈಲ್​​​​ಗಳನ್ನೇ ಜನರು ಬಳಸುತ್ತಿದ್ಧಾರೆ. ಇದರಿಂದ ವಿದೇಶಾಂಗ ನೀತಿಯಲ್ಲಿ ಸಂಬಂಧ ವೃದ್ಧಿಯಾಗುವುದಿಲ್ಲ.  ಇದರಿಂದಾಗಿ ಭಾರತದ ಹುತಾತ್ಮರಾದ 20 ಸೈನಿಕರು ಮತ್ತು ಗಾಯಗೊಂಡವರಿಗೆ ಸಾಂತ್ವನ ಹೇಳಿದಂತಾಗುವುದಿಲ್ಲ.ಈ ಮೊಬೈಲ್ ಅಪ್ಲಿಕೇಷನ್​ಗಳನ್ನು ಬ್ಯಾನ್ ಮಾಡಿರುವುದು ದೇಶದ ಭದ್ರತೆಗೆ ಎಷ್ಟು ಉಪಕಾರವಾಗುವುದೋ ಗೊತ್ತಿಲ್ಲ,  ನಾವು ಗಡಿ ನಿಯಂತ್ರಣ ರೇಖೆ ದಾಟಿ ಒಳಗೆ ಬಂದಿಲ್ಲ ಎಂದು ಚೀನಾ ವಾದಿಸುತ್ತಿದೆ. ಹಾಗಾದರೆ ನಮ್ಮ ಸೈನಿಕರು ಹೇಗೆ ಬಲಿಯಾದರು ಎಂದು ಅವರು‌ ಪ್ರಶ್ನಿಸಿದ್ದಾರೆ

Comments