ಮಂಗಳೂರಿನ ಫಳ್ನೀರ್ ನಲ್ಲಿ ಮತ್ತೆ ಗೋ ಮಾಂಸ ಸಾಗಾಟ‌‌ ಮಾಡುತ್ತಿದ್ದ ವೇಳೆ ಹಲ್ಲೆ


ಮಂಗಳೂರು: ಗೋ ಮಾಂಸ ಸಾಗಾಟ‌‌ ಮಾಡುತ್ತಿದ್ದ ವೇಳೆ ಚಾಲಕನಿಗೆ ಹಲ್ಲೆಗೈದ ಘಟನೆ ಮಂಗಳೂರಿನ ಫಳ್ನೀರ್ ನಲ್ಲಿ ಇಂದು ಬೆಳಿಗ್ಗೆ ನಡೆದಿದೆ.


ಕುದ್ರೋಳಿಯ ಕಸಾಯಿಖಾನೆಯಿಂದ ರಶೀದ್ ಎಂಬುವವರು ತನ್ನ ರಿಕ್ಷಾ ಟೆಂಪೋದಲ್ಲಿ ಕಂಕನಾಡಿ ಮಾರ್ಕೆಟ್ ಗೆ 200 ಕೆಜಿಯಷ್ಟು ದನದ ಮಾಂಸವನ್ನು  ಸಾಗಾಟ ಮಾಡುತ್ತಿದ್ದರು.  ಕಾರು ಮತ್ತು ದ್ವಿಚಕ್ರ ವಾಹನದಲ್ಲಿ ಬಂದ  ತಂಡವೊಂದು ಫಳ್ನೀರ್ ಹೈಲ್ಯಾಂಡ್ ಆಸ್ಪತ್ರೆ - ಕಂಕನಾಡಿ ಮಾರ್ಕೆಟ್ ರಸ್ತೆ ಮಧ್ಯೆ ರಿಕ್ಷಾ ಟೆಂಪೋವನ್ನು ತಡೆದು ನಿಲ್ಲಿಸಿ ರಿಕ್ಷಾ ಟೆಂಪೋ ಚಾಲಕ ರಶೀದ್‌ ಮೇಲೆ ಹಲ್ಲೆ ಮಾಡಿದ್ದಾರೆ. ಇದೇ ವೇಳೆ ದುಷ್ಕರ್ಮಿಗಳು 
ರಿಕ್ಷಾ ಟೆಂಪೋ ಗಾಜು ಸಹಿತ ಇತರ ಭಾಗಗಳಿಗೆ ಹಾನಿ‌ ಮಾಡಿ ಮಾಂಸಕ್ಕೆ ಸೀಮೆಎಣ್ಣೆ ಸುರಿದು ಪರಾರಿಯಾಗಿದ್ದಾರೆ.

Comments