ಶ್ರೀನಿವಾಸ ಬಜಾಲ್ ಹುತಾತ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರ


ಡಿವೈಎಫ್ಐ ನಾಯಕ  ಶ್ರೀನಿವಾಸ್ ಬಜಾಲ್ ಅವರ 18 ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ಇಂದು ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕದ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗು ಮಾಸ್ಕ್ , ಸಾನಿಟೈಸರ್ ವಿತರಿಸಲಾಯಿತು. 

ರಕ್ತದಾನ ಕಾರ್ಯಕ್ರಮದ ಉದ್ಘಾಟನೆಯನ್ನು ಡಿವೈಎಫ್ಐ ಮಂಗಳೂರು ನಗರ ಅದ್ಯಕ್ಷರಾದ ನವೀನ್ ಕೊಂಚಾಡಿ ಮಾತನಾಡಿದರು.

ಈ ವೇಳೆ ವೇದಿಕೆಯಲ್ಲಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಜಿತ್ ಶೆಟ್ಟಿ ವಾಮಂಜೂರು, ನಾಗೇಶ್ ಶೆಟ್ಟಿ ಉಪಸ್ಥಿತರಿದ್ದರು ಸಭೆಯ ಅದ್ಯಕ್ಷತೆಯನ್ನು ಡಿವೈಎಫ್ಐ ಮುಖಂಡ ದೀಪಕ್ ಬೊಲ್ಲ ವಹಿಸಿದ್ದರು. ಡಿವೈಎಫ್ಐ ಪಕ್ಕಲಡ್ಕ ಘಟಕದ ಕಾರ್ಯದರ್ಶಿ ಧಿರಾಜ್ ಪಕ್ಕಲಡ್ಕ ಸ್ವಾಗತ ಕೋರಿ ವರಪ್ರಸಾದ್ ವಂದಿಸಿದರು.  ಶಿಬಿರದಲ್ಲಿ 50 ಕ್ಕೂ ಮಿಕ್ಕಿ ಕಾರ್ಯಕರ್ತರು ರಕ್ತದಾನಮಾಡಿದರು.

Comments