ಭಜರಂಗದಳ ದಾಳಿ;ಮಂಗಳೂರಿನಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ


ಮಂಗಳೂರು: 
ಅಕ್ರಮ ಜಾನುವಾರು ಸಾಗಾಟ ನಡೆಯುತ್ತಿದ್ದುದನ್ನು ಮಂಗಳೂರು ಭಜರಂಗದಳ ಸಂಘಟನೆ ದಾಳಿ ಮಾಡಿ ಪತ್ತೆಹಚ್ಚಿದೆ.

 ಮಂಗಳೂರಿನ ಕೊಟ್ಟಾರ ಬಳಿ
ಉರ್ವ ಪೊಲೀಸ್ ಠಾಣೆಗೆ ಸಮೀಪದಲ್ಲೇ ಈ ಘಟನೆ ನಡೆದಿದೆ. ಮಿನಿ ಟೆಂಪೋ ತಡೆದು 4 ಕೋಣಗಳನ್ನು ರಕ್ಷಣೆ ಮಾಡಿ ಒಬ್ಬ ಆರೋಪಿಯನ್ನು ಹಿಡಿದು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
 
 ಉಡುಪಿ ಯಿಂದ ಮಂಗಳೂರು ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 4 ಕೋಣಗಳ ರಕ್ಷಣೆ ಮಾಡಲಾಗಿದೆ.

 ಉರ್ವ ಪೊಲೀಸರು ಸ್ಥಳಕ್ಕೆ ಧಾವಿಸಿ ಕೋಣಗಳು ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Comments