ಮಂಗಳೂರಿನಲ್ಲಿ ಇಂದು ಬಾಲಕ ಸೇರಿದಂತೆ ಇಬ್ಬರು ಕೊರೊನಾ ಸೋಂಕಿತರು ಗುಣಮುಖಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಇಬ್ಬರು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ‌.

17 ವರ್ಷದ ಬಾಲಕ ಮತ್ತು 28 ವರ್ಷದ ಮಹಿಳೆ ಗುಣಮುಖರಾದವರು. ಇವರಿಬ್ಬರ ಗಂಟಲು ದ್ರವದ ಪರೀಕ್ಷೆ  ನೆಗೆಟಿವ್ ಬಂದ ಹಿನ್ನಲೆಯಲ್ಲಿ ಇಂದು ಇವರನ್ನು ‌ಮನೆಗೆ ಕಳುಹಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 222 ಪ್ರಕರಣಗಳು ಪತ್ತೆಯಾಗಿದ್ದು  117 ಮಂದಿ ಗುಣಮುಖರಾಗಿದ್ದಾರೆ.

Comments