ವಿವಿಧ ಸಂಘಟನೆಗಳೊಂದಿಗೆ ರಾಯಭಾರಿಯಂತೆ ಜನಸೇವೆಯಲ್ಲಿ "'ರಕ್ಷ ಹೆಲ್ಪ್ ಲೈನ್ " ಅಬ್ದುಲ್ ರಜಾಕ್ ಉಜಿರೆ

ಪ್ರಸಕ್ತ ಕೊರೋನ ಸಾಂಕ್ರಾಮಿಕ ರೋಗದ ಸಮಯದಲ್ಲಿ, ಜನರು ದೇಶ - ವಿದೇಶದಲ್ಲಿ ಬೇರೆ - ಬೇರೆ  ವಿಧದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ , ಗಲ್ಫ್  ರಾಷ್ಟ್ರದಲ್ಲಿ ಒಳ್ಳೆಯ ಕೆಲಸ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಎಲ್ಲವೂ ಚೆನ್ನಾಗಿದ್ದರೂ  ಕುಟುಂಬವನ್ನು ದುಬೈಯಲ್ಲಿ ಬಿಟ್ಟು, ಕೆಲವು ದಿನಗಳಿಗೆ ಕೆಲಸ ನಿಮಿತ್ತ ಊರಿಗೆ ಬಂದು ಸಿಕ್ಕಿಹಾಕಿಕೊಂಡಿರುವ  ಸಾಕಷ್ಟು ಉದಾಹರಣೆಗಳಿವೆ, ಎಲ್ಲವೂ ಇದ್ದು ಕೂಡ ತಾಂತ್ರಿಕ ಹಡಚನೆಯಿಂದ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದಾರೆ, ಈ ಬಿಕ್ಕಟ್ಟು ಎಲ್ಲಾ ವರ್ಗಗಳಿಗೂ ಪರಿಣಾಮ ಬೀರಿದೆ , ಇನ್ನು ವಿದೇಶಕ್ಕೆ ಕೆಲಸ  ಅನ್ವೇಷಣೆ 'ಗೆ ವಿಸಿಟ್ ವೀಸಾ'ದಲ್ಲಿ ಹೋಗಿ ಸಂಭಂದಿಕರ ಅಥವಾ ಸ್ನೇಹಿತರ  ರೂಮಲ್ಲಿ ಅತಂತ್ರವಾಗಿರುವವರು , ಕೆಲಸ ಕಳಕೊಂಡವರು ಮತ್ತು  ಕೆಲಸವಿದ್ದು ಸಂಬಳ ಸಿಗದೇ ಇರುವವರು ಇಂತಹ  ಸಮಸ್ಯೆಗಳ ಸರಮಾಲೆಯೇ ಇದೆ . 
ಇಂತಹ ಸನ್ನಿವೇಶದಲ್ಲಿ ಜನರ ಸಮಸ್ಯಗಳಿಗನುಸರವಾಗಿ ಕೆಲಸ ಮಾಡುವ ಸರಕಾರಿ ಧಾರ್ಮಿಕ,ಬಾಷವಾರು  ಸಂಘಟನೆಗಳೂ ಧಾರಾಳವಿದ್ದರೂ , ಸಮಸ್ಯೆಗಳ ಪಕ್ವತೆ - ಪ್ರಾಮುಖ್ಯತೆ ನೋಡಿ ಸಂಘಟನೆಗಳು ಪ್ರತಿಕ್ರಯಿಸುತ್ತದೆ ,ಇತ್ತ ದುಬೈ -ಯು.ಎ. ಇ'ಯಲ್ಲಿ   ಎಲ್ಲಾ ಸಂಘಟನೆಯೊಂದಿಗೆ  ಕೆಲಸ ಮಾಡುವ ವಿಶಾಲ ವ್ಯಕ್ತಿತ್ವ  ಮತ್ತು ಸಂಘಟನೆಯೊಂದಿಗೆ  ರಾಯಭಾರಿಯಂತೆ ಕೆಲಸ ಮಾಡುತ್ತಿರುವ ಒಂದು ವ್ಯಕ್ತಿತ್ವವಿದೇ ಅವರೇ  ‘ಅಬ್ದುಲ್ ರಜಾಕ್ ಉಜಿರೆ , ಊರಿನ ಜನರರು ಎಲ್ಲಿ ಯಾವ ಸಮಸ್ಯಗಳನ್ನು ಎದುರಿಸುತ್ತಾರೆ ಎಂಬ ಅನ್ವೇಷನೆ ಅವರದ್ದು ಅದನ್ನು ಸಮುದಾಯದ ಸಂಘಟನೆಗಳ ವರದಿ ಮಾಡುತ್ತಾರೆ ! ಮಾತ್ರವಲ್ಲ ತನ್ನಿಂದ ಕೂಡ ಆಗುವ ಸಹಾಯವನ್ನು ಜಾತಿ - ಧರ್ಮದ ಆಚೆ ನಿಂತು ಮಾಡುತ್ತಾರೆ , 
ಇವರ ಕಾರ್ಯ ವೈಖರಿ ನೋಡುವಾಗ ಯುದ್ಧರಂಗದಲ್ಲಿ ರೆಡ್ - ಕ್ರಾಸ್ ಸದಸ್ಯನಂತೆ ಕಾಣುತ್ತದೆ , ಈಗಾಗಲೇ ಇವರಲ್ಲಿ  ವಿವಿಧ  ವಾಟ್ಸಪ್- ಗ್ರೂಪ್ ಗಳಿವೆ , ಉದ್ಯೋಗ  ,ಹಳೆ ವಿದ್ಯಾರ್ಥಿ ,ಮತ್ತು ಇತರ ಅನೇಕ ಅಧಿಕೃತ  ಸಂಘಟನೆಗಳ ಗ್ರೂಪಲ್ಲಿ ಸದಾ ವಿಚಾರ - ವಿನಿಮಯಗಲನ್ನು ಮಾಡುತ್ತಾ ಇರುತ್ತಾರೆ , ಇತ್ತೀಚಿಗೆ ತಾನು ಮಾಡುವ ಕಾರ್ಯವೈಕರಿಗಳನ್ನು  ತನ್ನ ಕಾಲೇಜಿನ  ಸ್ನೇಹಿತರ ತಂಡದಲ್ಲಿ ಹಂಚಿ ಕೊಂಡು ಈ ಕೆಲಸ ಕಾರ್ಯಗಳನ್ನು  'ರಕ್ಷ ಹೆಲ್ಪ್ ಲೈನ್ ಸರ್ವಿಸಸ್ ' ಎಂಬ ಹೆಸರಿನಲ್ಲಿ ಮುಂದುವರಿಸಲು ತೀರ್ಮಾನಿಸಿದ್ದಾರೆ. ಈಗಾಗಲೇ ಇತ್ತ  ಬೆಳ್ತಂಗಡಿ ತಾಲೂಕಿನ ಕೆಲವು ಕುಗ್ರಾಮಗಳಿಗೆ , ಸ್ಥಳೀಯ  ಸಂಘಟನೆಗಳ ಸಹಾಯದಿಂದ ರೇಷನ್ ಕಿಟ್ ಗಳನ್ನು ವಿತರಿಸಿದ್ದಾರೆ , ಸಮಸ್ಯೆಗಳಿಗನುಸಾರವಾಗಿ  ಊರಲ್ಲಿ ಮತ್ತು ಯು.ಎ. ಇ'ಯಲ್ಲಿ  ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬುದು ಅಬ್ದುಲ್ ರಜಾಕ್ ಆಕಾಂಕ್ಷೆ  ಅದುವೇ ಬಾಕಿ ಉಳಿಯುದು ಎಂಬುದು ಅವರ ನಂಬಿಕೆ .

Comments