ಕುವೈಟ್ ನಲ್ಲಿ ಅಗ್ನಿ ದುರಂತ: ಮಂಗಳೂರಿನ ವ್ಯಕ್ತಿ ಸಾವು


ಮಂಗಳೂರು; 
ಕುವೈಟ್ ನ ತೈಲ ಮತ್ತು ಅನಿಲ ಕಂಪೆನಿಯಲ್ಲಿ ನಡೆದ ದುರಂತದಲ್ಲಿ ಮಂಗಳೂರಿನ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ಮಂಗಳೂರಿನ ಪಡೀಲ್ ಕೊಡಕ್ಕಲ್ ನಿವಾಸಿ ಸತೀಶ್ ಶೆಟ್ಟಿ ಮೃತಪಟ್ಟವರು. ಸತೀಶ್ ಅವರು ಜೂನ್ 11 ರಂದು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿರುವಾಗ ವಿಷಕಾರಿ ಅನಿಲ ಬಿಡುಗಡೆಯಾಗಿದ್ದು ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಜೂನ್ 14 ರಂದು ಮೃತಪಟ್ಟಿದ್ದಾರೆ.

Comments