ಸ್ಯಾಕೋ,ಎಕ್ಸ್ ಪಟೈಸ್ ಮತ್ತು ಮುಝೈನ್ ಕಂಪೆನಿಯ ಮಾನವೀಯ ಸೇವೆ ಶ್ಲಾಘನೀಯ: ಎಸ್ ಡಿಪಿಐ


ಮಂಗಳೂರು: ಸೌದಿ ಅರೇಬಿಯಾದಲ್ಲಿ ತೀವ್ರ ಸಂಕಷ್ಟದಲ್ಲಿರುವ  ಅನಿವಾಸಿಗಳಿಗೆ ತಮ್ಮದೇ ಸ್ವಂತ ಖರ್ಚಿನಲ್ಲಿ ಚಾರ್ಟೆಡ್ ವಿಮಾನ ಮೂಲಕ ತಾಯ್ನಾಡಿಗೆ ಮರಳಲು ನೆರವಾದ ಸ್ಯಾಕೋ ಕಂಪನಿಯ ಮಾಲಕರಾದ ಅಲ್ತಾಫ್ ಉಳ್ಳಾಲ್ ಮತ್ತು ಬಶೀರ್ ಸಾಗರ್ ರವರಿಗೆ  ಎಸ್ ಡಿ ಪಿ ಐ ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಧನ್ಯವಾದ ಸಲ್ಲಿಸಿದ್ದಾರೆ.

 ಮುಝೈನ್  ಮಾಲಕರಾದ ಝಕರಿಯಾ ಜೋಕಟ್ಟೆ ಮತ್ತು ಎಕ್ಸ್ ಪಟೈಸ್ ನ ಮಾಲಕರಾದ ಶೈಕ್ ಕರ್ನಿರೆ ರವರು ತನ್ನ ಕಂಪನಿಯಲ್ಲಿ ಜಿಲ್ಲೆಯ ಹಲವು ಯುವಕರಿಗೆ ಉದ್ಯೋಗ ಕೊಟ್ಟು ನಾಡಿನ ಜನತೆಗೆ ಆಶಾಕೇಂದ್ರವಾಗಿದ್ದ ಈ ಎರಡು ಕಂಪೆನಿ Covid19 ನ ಸಂದಿಗ್ಧ ಘಟ್ಟದಲ್ಲಿ ನಾಡಿಗೆ ಹೊರಡಲು ಬಯಸಿದವರನ್ನು ಎರಡು ವಿಮಾನದ ಮೂಲಕ ಊರಿಗೆ ಬರಲು ವ್ಯವಸ್ಥೆಗೊಳಿಸಿದ  ಝಕರಿಯಾ ಜೋಕಟ್ಟೆ ಮತ್ತು ಶೈಕ್ ಕರ್ನಿರೆ ಯವರ ಕಾರ್ಯವು ಶ್ಲಾಘನೀಯ.
ಸ್ಯಾಕೋ ಕಂಪನಿ ಮೊದಲ ವಿಮಾನದಲ್ಲಿ ಸೌದಿ ಅರೇಬಿಯಾದ ವಿವಿಧ ಭಾಗಗಳಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದ ಅನಿವಾಸಿಗಳನ್ನು ಗುರುತಿಸಿ ಊರಿಗೆ ಮರಳಲು ನೆರವಾಗಿದೆ.
ವಿಮಾನದ ಸಾಮರ್ಥ್ಯ 180. ಬಂದಿದ್ದ ಅರ್ಜಿ 450 ತಮ್ಮ ಸ್ವಂತ ಖರ್ಚಿನಲ್ಲಿ 180 ಅನಿವಾಸಿಗರನ್ನು ಸೌದಿ ಅರೇಬಿಯಾದಿಂದ ಊರಿಗೆ ತಲುಪಿಸಿದ ಅಲ್ತಾಫ್ಉಳ್ಲಾಲ್ ಮತ್ತು ಬಶೀರ್ ಸಾಗರ್ ರವರ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದವರು ಹೇಳಿದ್ದಾರೆ.

Comments