ಮಂಗಳೂರು ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಬಂದ ವ್ಯಾಪಾರಿಗಳು, ಅನುಮತಿ ನೀಡದ ಪಾಲಿಕೆ- ಮಾತಿನ ಚಕಮಕಿಮಂಗಳೂರು; ಎರಡು ತಿಂಗಳಿನಿಂದ ಮುಚ್ಚಿದ್ದ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಮತ್ತೆ ವ್ಯಾಪಾರಕ್ಕೆ ಸಿದ್ದತೆ ನಡೆಸಿದ್ದ ಪಾಲಿಕೆ ಅವಕಾಶ ನಿರಾಕರಿಸಿದೆ.

ಮಂಗಳೂರಿನ ಕೇಂದ್ರ ಮಾರುಕಟ್ಟೆ ತೆರೆಯಲು ವ್ಯಾಪಾರಿಗಳು ಮುಂದಾಗಿದ್ದು ಅಂಗಡಿ ತೆರೆಯಲು ಬಂದ ವ್ಯಾಪಾರಿಗಳು ಮತ್ತು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಮಾರುಕಟ್ಟೆಯನ್ನ ಮುಚ್ಚಿ ಮಂಗಳೂರು ಮಹಾನಗರ ಪಾಲಿಕೆ ಆದೇಶವಿದ್ದರೂ ಮತ್ತೆ ತೆರೆಯಲು ಸಿದ್ದತೆ ನಡೆಸಲಾಗಿದೆ.ಎ.7ರಂದು ಹೊಸ ಮಾರುಕಟ್ಟೆ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಕೇಂದ್ರ ಮಾರುಕಟ್ಟೆ ‌ಮುಚ್ಚಲಾಗಿತ್ತು.151 ಸಗಟು ಮತ್ತು 300 ಚಿಲ್ಲರೆ ವ್ಯಾಪಾರಿಗಳನ್ನು ಸುರತ್ಕಲ್ ಎಪಿಎಂಸಿಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಪಾಲಿಕೆ ಆದೇಶ ಉಲ್ಲಂಘಿಸಿ ಮತ್ತೆ ಕೇಂದ್ರ ಮಾರುಕಟ್ಟೆ ತೆರೆಯಲು ಸಿದ್ದತೆ ನಡೆಸಲಾಗಿದೆ. ಆದರೆ ಇದಕ್ಕೆ ಅವಕಾಶ ನೀಡದೆ ಅಂಗಡಿ ತೆರೆಯದಂತೆ ಪಾಲಿಕೆ ಸೂಚಿಸಿದೆ.

ಮಂಗಳೂರಿನ ಕೇಂದ್ರ ಮಾರುಕಟ್ಟೆ ಎದುರು ಭಾರೀ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು ಮಾರುಕಟ್ಟೆ ತೆರೆದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ಪಾಲಿಕೆ ಕಮಿಷನರ್ ನೀಡಿದ್ದಾರೆ

Comments