ಬಂಟ್ವಾಳದಲ್ಲಿ ಬಿಜೆಪಿ ಮಂಗಳೂರು ವಿಭಾಗಮಟ್ಟದ ಸಭೆ


ಮಂಗಳೂರು; ಬಿಜೆಪಿಯ ಮಂಗಳೂರು ವಿಭಾಗಮಟ್ಟದ ಸಭೆ ಇಂದು ಬಂಟ್ವಾಳದಲ್ಲಿ ನಡೆಯಿತು‌

ಕೊಡಗು , ಉಡುಪಿ , ದಕ್ಷಿಣ ಕನ್ನಡ ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಿಭಾಗಮಟ್ಟದ ಸಭೆ ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆಯಿತು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ತುಂಬೆ ಬಂಟರ ಭವನದಲ್ಲಿ   ಮಂಗಳೂರು ವಿಭಾಗದ ಸಭೆಯಲ್ಲಿ ಮಂಗಳೂರು ವಿಭಾಗದ 3 ಸಂಘಟನಾತ್ಮಕ ಜಿಲ್ಲೆಗಳಾದ ಉಡುಪಿ, ಕೊಡಗು ಮತ್ತು ಮಂಗಳೂರು ಜಿಲ್ಲೆಗಳ ಸಭೆಗಳನ್ನು ನಡೆಸಲಾಯಿತು. ಈ ಸಭೆಯಲ್ಲಿ  ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ  ಅರುಣ್ ಕುಮಾರ್,ಉಸ್ತುವಾರಿ ಸಚಿವರಾದ  ಕೋಟ ಶ್ರೀನಿವಾಸ ಪೂಜಾರಿ , ಮೂರು ಜಿಲ್ಲೆಯ ಚುನಾಯಿತ  ಶಾಸಕರುಗಳು ,ವಿಭಾಗದ ಪ್ರಮುಖರು, ಜಿಲ್ಲಾ ಅಧ್ಯಕ್ಷರುಗಳು , ಮಂಡಲ ಅಧ್ಯಕ್ಷರುಗಳು ಹಾಗೂ ಪ್ರಮುಖರುಗಳು ಭಾಗವಹಿಸಿದ್ದರು.

Comments