ಪೆಟ್ರೋಲ್ ಬೆಲೆ ಹೆಚ್ಚಳ- ಕೇಂದ್ರ ದಿಂದ ಇತಿಹಾಸ ನಿರ್ಮಾಣ; ಖಾದರ್ ಲೇವಡಿ


 ಈಗಾಗಲೇ ದಿನೇ ದಿನೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಇದೇ ವೇಳೆ ಪೆಟ್ರೋಲ್‌ಗಿಂತಲೂ ಡೀಸೆಲ್ ಬೆಲೆ ಹೆಚ್ಚಳವಾಗಿರುವುದು ಕೇಂದ್ರ ಸರಕಾರದಿಂದ ನಿರ್ಮಿಸಲಾದ ಹೊಸ ಇತಿಹಾಸ ಹಾಗೂ ಸಾಧನೆ ಎಂದು ಶಾಸಕ ಯು.ಟಿ.ಖಾದರ್ ಟೀಕಿಸಿದ್ದಾರೆ. ಈ ಕುರಿತು ಮಂಗಳೂರಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಇಂಧನ ಬೆಲೆ ಏರಿಕೆಯಿಂದಾಗಿ ದೇಶದ ಎಲ್ಲಾ ವಸ್ತುಗಳ ಸಾಗಾಟದ ಮೇಲೆ ಪರಿಣಾಮ ಬೀರಲಿದ್ದು, ಈ ಬಗ್ಗೆ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಅರಿವಿದ್ದರೂ ಅವರು ಮಾತನಾಡಲಾಗದಂತಹ ಪರಿಸ್ಥಿತಿ ಎದುರಾಗಿದೆ ಎಂದರು. ಯುಪಿಎ ಆಡಳಿತವಿದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲೊಂದಕ್ಕೆ ೧೩೧ ರೂ.ಗಳಿದ್ದಾಗ ಪೆಟ್ರೋಲ್ ಡೀಸೆಲ್ ಬೆಲೆ ೬೦-೬೫ರ ಆಸುಪಾಸಿನಲ್ಲಿತ್ತು. ಇದೀಗ ಬ್ಯಾರೆಲ್ ಬೆಲೆ ೩೫ರಿಂದ ೪೦ ರೂ.ಗಳಿರುವಾಗ ಪೆಟ್ರೋಲ್ ಡೀಸೆಲ್ ಬೆಲೆ ೮೦ ರೂ.ಗಳಿಗೆ ಏರಿಕೆಯಾಗಿರುವ ಬಗ್ಗೆ  ಇಂಧನ ಸಚಿವರು ಜನತೆಗೆ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.

Comments