ಉಳ್ಳಾಲದಲ್ಲಿ ಸೋಮವಾರದಿಂದ ಕೊರೊನಾ ರ‌್ಯಾಂಡಮ್ ತಪಾಸಣೆ; ಖಾದರ್ ಉಳ್ಳಾಲ ವ್ಯಾಪ್ತಿಯಲ್ಲಿ ಕೊರೋನ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿರುವುದರಿಂದ ಮುಂಜಾಗೃತಾ ಕ್ರಮವಾಗಿ ಕೊರೋನ ಸೋಂಕಿನ ರ್‍ಯಾಂಡಮ್ ತಪಾಸಣೆ ಸೋಮವಾರದಿಂದ ನಡೆಸಲಾಗುವುದು ಅಂತಾ ಶಾಸಕ ಯು.ಟಿ.ಖಾದರ್ ಅಂತಾ ಹೇಳಿದ್ರು.
ಈ ಕುರಿತು ಮಂಗಳೂರಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನ ಸೋಂಕಿಗೆ ಉಳ್ಳಾಲದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈಗಾಗಲೇ ನಾಲ್ಕು ಮಂದಿ ಪೊಲೀಸರಿಗೂ ಕೊರೋನ ಸೋಂಕು ಕಾಣಿಸಿಕೊಂಡಿದ್ದು, ಇದೇ ವೇಳೆ ಇಂದು ಒಂದು ಮನೆಯ ಹಲವಾರು ಮಂದಿಯಲ್ಲಿ ಕೊರೋನ ಸೋಂಕು ದೃಢಗೊಂಡಿದೆ. ಹಾಗಾಗಿ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕವಾಗಿ ಹೆಚ್ಚಾಗಿ ಸಂಪರ್ಕದಲ್ಲಿರುವವರ ಕೊರೋನ ತಪಾಸಣೆ ಮಾಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ಪೊಲೀಸರು ಹಾಗೂ ಅವರ ಕುಟುಂಬಸ್ಥರ ತಪಾಸಣೆ ನಡೆಸಲಾಗಿದೆ ಎಂದರು.
ತಪಾಸಣೆ ವರದಿ ಇಲ್ಲದೆ ವ್ಯಾಪಾರಕ್ಕೆ ಅವಕಾಶವಿಲ್ಲ. ಸೋಮವಾರದಂದು ಈ ಬಗ್ಗೆ ಧಾರ್ಮಿಕ, ಸಾಮಾಜಿಕ ಪ್ರಮುಖರ ಸಭೆ ನಡೆಸಿ ಪಟ್ಟಿ ತಯಾರಿಸಿಕೊಂಡು ಮೀನು ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು, ರಿಕ್ಷಾ- ಟೆಂಪೋ ಚಾಲಕರಿಗೆ ಮೊದಲ ಹಂತದಲ್ಲಿ ಉಚಿತವಾಗಿ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ. ಎಲ್ಲರೂ ಸಹಕರಿಸಬೇಕು. ಮುಂದೆ ತಪಾಸಣೆಯ ಅಧಿಕೃತ ವರದಿ ಇಲ್ಲದೆ ವ್ಯಾಪಾರ ಮಾಡದಂತೆ ನಗರಸಭೆ ಕ್ರಮ ವಹಿಸಲಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ತಿಳಿಸಿದರು.

Comments