ದ.ಕ ಜಿಲ್ಲೆಯಲ್ಲಿ ಎರಡು ವರ್ಷದ ಮಗು ಸೇರಿ ಮೂವರು ಗುಣಮುಖಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎರಡು ವರ್ಷದ ಮಗು ಸೇರಿದಂತೆ ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.
ರೋಗಿ ಸಂಖ್ಯೆ 2506 ( 2 ವರ್ಷ) , ರೋಗಿ ಸಂಖ್ಯೆ 2868 (61 ವರ್ಷ), ರೋಗಿ ಸಂಖ್ಯೆ 3185 ( 42ವರ್ಷ) ಗುಣಮುಖರಾವರು.
ಇವರು ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಎರಡು ಬಾರಿ ಗಂಟಲು ದ್ರವ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಗುಣಮುಖ ಎಂದು ಘೋಷಿಸಿ ಬಿಡುಗಡೆ ಮಾಡಲಾಗಿದೆ. ಈವರೆಗೆ  ಪಾಸಿಟಿವ್ ಬಂದಿರುವ 143 ಮಂದಿಯಲ್ಲಿ 76 ಮಂದಿ ಗುಣಮುಖರಾಗಿದ್ದಾರೆ.

Comments