ಪಿಲಿಕುಲದಲ್ಲಿ ಪ್ರಾಣಿಪಕ್ಷಿಗಳಿಗೂ ಇದೆ ಕ್ವಾರಂಟೈನ್


ಮಂಗಳೂರು: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪ್ರಾಣಿ ಪಕ್ಷಿಗಳಿಗೆ ಹಿಂದಿನಿಂದಲೂ ಕ್ವಾರಂಟೈನ್ ಮಾಡುವ ವ್ಯವಸ್ಥೆ  ಇದ್ದು  ಇದನ್ನು ಇನ್ನಷ್ಟು ವ್ಯವಸ್ಥಿತವಾಗಿ ಮಾಡಲು ಪ್ರತ್ಯೇಕ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ.


ಪಿಲಿಕುಳ ಉದ್ಯಾನವನಕ್ಕೆ ವಿವಿಧ ಮೃಗಾಲಯಗಳಿಂದ ಪ್ರಾಣಿ - ಪಕ್ಷಿಗಳನ್ನು ಕರೆ ತರಲಾಗುತ್ತದೆ. ಹೀಗೆ ತಂದ ಪ್ರಾಣಿ - ಪಕ್ಷಿಗಳನ್ನು ನೇರವಾಗಿ ಪ್ರವಾಸಿಗರ ವೀಕ್ಷಣೆಗೆ ಬಿಡದೆ ಎರಡು ತಿಂಗಳ ಕಾಲ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗುತ್ತದೆ. ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿ ಯಾವುದೇ ರೋಗ ಲಕ್ಷಣ ಇಲ್ಲ ಎಂದು ಬಳಿಕ ಮೃಗಾಲಯಕ್ಕೆ ಬಿಡಲಾಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಕ್ವಾರಂಟೈನ್ ವ್ಯವಸ್ಥೆ ಯನ್ನು ಇನ್ನಷ್ಟು ಎಚ್ಚರಿಕೆಯಿಂದ ಮಾಡಲು‌ ನಿರ್ಧರಿಸಲಾಗಿದ್ದು ಇದಕ್ಕಾಗಿ ಪ್ರತ್ಯೇಕ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ.

Comments