ಸಾವರ್ಕರ್ ಹೆಸರಿನ ವಿವಾದದ ಬೆನ್ನಿಗೆ ಮಂಗಳೂರಿನ ಮೂರು ಕಡೆ ಕಾಣಿಸಿಕೊಂಡ ಬ್ಯಾನರ್


ಮಂಗಳೂರು; ವೀರ ಸಾವರ್ಕರ್ ಹೆಸರನ್ನು ಯಲಹಂಕ ಸೇತುವೆಗೆ ಇಡುವ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿದ್ದಂತೆ ಮಂಗಳೂರಿನಲ್ಲಿ ಅಲ್ಲಲ್ಲಿ ವಿವಿಧ ಹೆಸರಿನ ಬ್ಯಾನರ್ ಕಾಣಿಸಿಕೊಂಡಿದೆ.
ನಿನ್ನೆ ಪಂಪ್ ವೆಲ್ ಪ್ಲೈ ಓವರ್ ನಲ್ಲಿ ವೀರಸಾವರ್ಕರ್ ಬ್ಯಾನರ್ ಕಾಣಿಸಿಕೊಂಡಿತ್ತು.ಬಳಿಕ ಅದನ್ನು ತೆರವು ಮಾಡಲಾಗಿತ್ತು. ಇಂದು ರಾತ್ರಿ ಮೂರು ಕಡೆ ಬ್ಯಾನರ್ ಕಾಣಿಸಿಕೊಂಡಿದೆ. ಪಂಪ್ ವೆಲ್ ಪ್ಲೈ ಓವರ್ ನಲ್ಲಿ ವೀರಸಾವರ್ಕರ್ ಹೆಸರಿನ ಬ್ಯಾನರ್ ಹಾಕಲಾಗಿದ್ದರೆ , ನೆಹರು ಮೈದಾನದಲ್ಲಿ ಕೋಟಿ ಚೆನ್ನಯ್ಯ ಹೆಸರಿನ ಬ್ಯಾನರ್ ಹಾಕಲಾಗಿದೆ. ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ರಾಣಿ ಅಬ್ಬಕ್ಕ ಹೆಸರಿನ ಬ್ಯಾನರ್ ಹಾಕಲಾಗಿದೆ.

Comments