ದೇವಸ್ಥಾನ ಆರಂಭ; ಕದ್ರಿ ಯಲ್ಲಿ ಸಚಿವ ಕೋಟ ಪೂಜೆ


ಮಂಗಳೂರು; ದೇವಸ್ಥಾನ ಇಂದಿನಿಂದ ಆರಂಭಕ್ಕೆ ಸರಕಾರ ಸೂಚಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಇಂದಿನಿಂದ ಭಕ್ತರಿಗೆ ಅವಕಾಶ ನೀಡಲಾಗಿದೆ.  ಈ ಹಿನ್ನೆಲೆಯಲ್ಲಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ಕದ್ರಿ ಮಂಜುನಾಥ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ದೇವಾಲಯ ಪ್ರವೇಸಿಸುವ ಮುನ್ನ‌ ನಿಯಮದಂತೆ ತಾಪಮಾನ ತಪಾಸಣೆ ನಡೆಸಿ ಸ್ಯಾನಿಟೈಸರ್ ಬಳಸಿ ಪೂಜೆ ಸಲ್ಲಿಸಿದರು.  ಈ ಸಂದರ್ಭದಲ್ಲಿ ಮಂಗಳೂರು ಮೇಯರ್‌ ಮತ್ತು ಮತ್ತಿತರರು ಜೊತೆಗಿದ್ದರು.

Comments