ಪಕ್ಕಲಡ್ಕದಲ್ಲಿ ಡಿವೈಎಫ್ಐ ನಿಂದ ವನಮಹೋತ್ಸವ ಆಚರಣೆ


ಮಂಗಳೂರು;ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕ ಮತ್ತು ಪಕ್ಕಲಡ್ಕ ಯುವಕ ಮಂಡಲದ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಇಂದು ಪಕ್ಕಲಡ್ಕ ದಲ್ಲಿ ಗಿಡಗಳ ವಿತರಣೆ ಹಾಗು ವನ ಮಹೋತ್ಸವ ಕಾರ್ಯಕ್ರಮ ನಡೆಯಿತು.
 ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಗಿಡ ವಿತರಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿ ನಾಗರಾಜ್ ಬಜಾಲ್, ಅದ್ಯಕ್ಷರಾದ ನಾಗೇಶ್ ಶೆಟ್ಟಿ, ಡಿವೈಎಫ್ಐ ಮುಖಂಡರಾದ ದೀಪಕ್, ವರಪ್ರಸಾದ್, ಧೀರಾಜ್, ಪ್ರಿತೇಶ್ ತಲವಾರ್, ಯಶ್ ರಾಜ್, ಲೋಕೇಶ್ ಎಂ, ಪ್ರಥ್ವಿ, ಅಖಿಲೇಶ್ ಮುಂತಾದವರು ಉಪಸ್ಥಿತರಿದ್ದರು.

Comments