ವಿಟ್ಲ: ಬಾಲಕಿಗೆ ಅಶ್ಲೀಲ ಸಂದೇಶ ರವಾನೆ – ಎರಡು ವಾರಗಳ ಹಿಂದೆ ಹಲ್ಲೆಗೊಳಗಾದ ಬಾಲಕನ ವಿರುದ್ದ ಪೋಕ್ಸೋ ಪ್ರಕರಣವಿಟ್ಲ: ಇತ್ತೀಚೆಗೆ ಹುಡುಗಿಗೆ ಸಂದೇಶ ಕಳುಹಿಸಿ ಗುಂಪೊಂದರಿಂದ ಹಲ್ಲೆಗೊಳಗಾದ ಬಾಲಕನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ.
 16 ವರ್ಷ ಪ್ರಾಯದ ಅಪ್ರಾಪ್ತ ಬಾಲಕ ಅಶ್ಲೀಲ ಸಂದೇಶ ರವಾನೆ ಮಾಡಿದ್ದೂ ಅಲ್ಲದೆ, ಬೆದರಿಕೆ ಹಾಕಿದ ಬಗ್ಗೆ ಬಾಲಕಿ ನೀಡಿದ ದೂರಿನ ಹಿನ್ನಲೆಯಲ್ಲಿ ಪೋಕ್ಸೋ ಪ್ರಕರಣ ದಾಖಲು ಮಾಡಲಾಗಿದೆ.
ಕೊಳ್ನಾಡು ಗ್ರಾಮದ ಕಾಡು ಮಠ ಪ್ರೌಢ ಶಾಲಾ ಮೈದಾನದಲ್ಲಿ ನಾಲ್ಕು ಮಂದಿಯಿಂದ ಹಲ್ಲೆಗೊಳಾದ 16 ವರ್ಷದ ಬಾಲಕ ಕಾನೂನು ಸಂಘರ್ಷಕ್ಕೊಳಗಾಗಿದ್ದಾನೆ. ಬಾಲಕಿಗೆ ಅಶ್ಲೀಲ ಸಂದೇಶ ಕಳುಹಿಸಿದ ಹಿನ್ನಲೆಯಲ್ಲಿ ಕನ್ಯಾನ ದಿನೇಶ ಸೇರಿ ನಾಲ್ಕು ಮಂದಿ ಎಪ್ರಿಲ್ 21ರಂದು ಬಾಲಕನಿಗೆ ಹಲ್ಲೆ ನಡೆಸಿದ್ದರು.

ಬಳಿಕ ಮೇ.27ರಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಮೇ.28ರಂದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೂ.2ರಂದು ಬಾಲಕಿ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ. ಬಾಲಕನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

Comments