ಪರ್ಯಾಯ ವ್ಯವಸ್ಥೆ ಕಲ್ಪಿಸದ ಬೀದಿಬದಿ ವ್ಯಾಪರಸ್ಥರನ್ನು ತೆರವುಗೊಳಿಸುವುದಕ್ಕೆ ಎಸ್ ಡಿಪಿಐ ಕಾರ್ಪೊರೇಟರ್ ಗಳಿಂದ ವಿರೋಧ.


ಮಂಗಳೂರು; ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ತಮ್ಮ ಕುಟುಂಬದ ಜೀವನಾಧಾರಕ್ಕಾಗಿ ಬೀದಿ ಬದಿಯಲ್ಲಿ ಚಿಕ್ಕ ಪುಟ್ಟ ವ್ಯಾಪಾರವನ್ನು ಮಾಡುತ್ತಿರುವವರನ್ನು ಪಾಲಿಕೆಯು ಜೂನ್ 5 ರಿಂದ ಟೈಗರ್ ಕಾರ್ಯಾಚರಣೆಯ ಮೂಲಕ ತೆರವುಗೊಳಿಸುವ ಕ್ರಮಕ್ಕೆ ಎಸ್‌ ಡಿಪಿಐ ಯ ಎರಡು ಕಾರ್ಪೊರೇಟರ್ ಗಳಾದ ಮುನೀಬ್ ಬೆಂಗ್ರೆ ಮತ್ತು ಸಂಶಾದ್ ಅಬೂಬಕ್ಕರ್ ರವರು ಪಾಲಿಕೆ ಆಯುಕ್ತರಿಗೆ ಮತ್ತು ಮೇಯರ್ ರವರಿಗೆ ಮನವಿ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.

ಕೋವಿಡ್ 19 ಲಾಕ್ ಡೌನ್ ನಿಂದ ಬೀದಿಬದಿ ವ್ಯಾಪಾರಸ್ಥರು ಸಂಕಷ್ಟದಲ್ಲಿರುವಾಗ ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ ಏಕಾಏಕಿ ತೆರವುಗೊಳಿಸುವ ಪ್ರಕ್ರಿಯೆ ಅಕ್ಷ್ಯಮ್ಯವಾಗಿದ್ದು ಇದನ್ನು ನಾವು ಖಂಡಿಸುತ್ತೇವೆ ಮತ್ತು ವಿರೋಧಿಸುತ್ತೇವೆ.
ಆದುದರಿಂದ ಆಯುಕ್ತರು ಈ ಬಗ್ಗೆ ಪರಿಶೀಲನೆ ಮಾಡಿ ಯಾವುದೇ ಕಾರಣಕ್ಕೂ ಬೀದಿಬದಿ ವ್ಯಾಪಾರಸ್ಥರಿಗೆ ತೋಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Comments