ದಮಾಮ್ ನಿಂದ ಮಂಗಳೂರು ತಲುಪಿದ ಸಾಕೋ ಕಂಪೆನಿಯ ಬಾಡಿಗೆ ವಿಮಾನ

ಮಂಗಳೂರು: ಕೊರೋನ ಲಾಕ್‌ಡೌನ್ ನಿಂದ ಸೌದಿ ಅರೇಬಿಯಾದಲ್ಲಿ ಸಿಲುಕಿದ್ದ ಕನ್ನಡಿಗರ ಪೈಕಿ 175 ಮಂದಿಯಿರುವ ಸಾಕೋ ಕಾಂಟ್ರಾಕ್ಟಿಂಗ್ ಕಂಪೆನಿಯ ಬಾಡಿಗೆ ವಿಮಾನ ಬುಧವಾರ ತಡ ರಾತ್ರಿ 1:15ಕ್ಕೆ ಮಂಗಳೂರಿಗೆ ತಲುಪಿದೆ.

ದಮಾಮ್ ನಲ್ಲಿರುವ ಸಾಕೋ ಕಂಪೆನಿಯ ನಿರ್ದೇಶಕರಾದ ಅಲ್ತಾಫ್ ಉಳ್ಳಾಲ್ ಹಾಗು ಬಶೀರ್ ಸಾಗರ್ ಅವರು ಈ ವಿಮಾನದ ವೆಚ್ಚ ಭರಿಸಿ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದರು.

ದಮಾಮ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆ 6.20ಕ್ಕೆ (ಸೌದಿ ಸಮಯ) ಹೊರಟ ವಿಮಾನವು ಮಂಗಳೂರಿಗೆ ರಾತ್ರಿ ಸುಮಾರು 1:15ಕ್ಕೆ ಮಂಗಳೂರು ತಲುಪಿತು. ಎಂಟು ಚಿಕ್ಕ ಮಕ್ಕಳು ಸಹಿತ 175 ಅತಂತ್ರ ಕನ್ನಡಿಗರು ಇದರಲ್ಲಿ ತಾಯ್ನಾಡಿಗೆ ತಲುಪಿದ್ದಾರೆ.

Comments