ತಮಿಳುನಾಡಿನ ಕ್ಷೌರಿಕನ ಪುತ್ರಿಯನ್ನು ಕೊಂಡಾಡಿದ ವಿಶ್ವಸಂಸ್ಥೆ; ಕಾರಣವೇನು ಗೊತ್ತಾ?

ತಮಿಳುನಾಡಿನ ಮದುರೈನ ಕ್ಷೌರಿಕನ ಪುತ್ರಿ ಎಂ ನೇತ್ರಾ ಳನ್ನು ವಿಶ್ವಸಂಸ್ಥೆ ಮುಕ್ತಕಂಠದಿಂದ ಕೊಂಡಾಡಿದೆ. ವಿಶ್ವಸಂಸ್ಥೆ ಎಂ ನೇತ್ರಾಳನ್ನು ಬಡವರಿಗಾಗಿ ಗುಡ್ ವಿಲ್ ಅಂಬಾಸಿಡರ್ ಆಗಿ ನೇಮಕ ಮಾಡಿ ಗೌರವಿಸಿದೆ.

ಎಂ ನೇತ್ರಾಳಿಗೆ ಈ ಗೌರವ ಸಿಕ್ಕಿದ್ದು ಏಕೆಂದರೆ?
ಎಂ ನೇತ್ರಾಳ ವಿದ್ಯಾಭ್ಯಾಸಕ್ಕಾಗಿ ಆಕೆಯ ತಂದೆ 5 ಲಕ್ಷ ರೂ ವನ್ ತೆಗೆದಿರಿಸಿದ್ದರು. ಇತ್ತೀಚೆಗೆ ಕೊರೊನಾ ಲಾಕ್ ಡೌನ್ ನಿಂದ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು. ವಲಸೆ ಕಾರ್ಮಿಕರು ಮನೆಗೆ ತೆರಳಲಾಗದೆ ಸಂಕಷ್ಟಕ್ಕೆ ಸಿಲುಕಿದಾಗ ಅವರ ನೆರವಿಗೆ ವಿದ್ಯಾಭ್ಯಾಸಕ್ಕೆ ತೆಗೆದಿರಿಸಲಾದ 5 ಲಕ್ಷ ರೂ ಹಣ ಬಳಸಿದ್ದಾರೆ. ಆ ಮೂಲಕ ಅವರು ಆದರ್ಶ ಸೇವೆ ಮಾಡಿದ್ದರು. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್  ಭಾಷಣದಲ್ಲಿ ಶ್ಲಾಘಿಸಿದ್ದರು. ಇದೀಗ ಅಭಿವೃದ್ಧಿ ಮತ್ತು ಶಾಂತಿಗಾಗಿನ ವಿಶ್ವಸಂಸ್ಥೆ ಒಕ್ಕೂಟ (ಯುಎನ್ಎಡಿಪಿ) ಅವರನ್ನು ಗುಡ್ ವಿಲ್ ರಾಯಭಾರಿಯಾಗಿ ನೇಮಿಸಿದೆ

Comments