ಗೃಹರಕ್ಷಕ ದಳದ ಸಿಬ್ಬಂದಿ ಕೆಲಸದಿಂದ ವಜಾ: ಧರಣಿ


ಮಂಗಳೂರು: ಗೃಹರಕ್ಷಕ ದಳದಿಂದ ವಜಾ ಮಾಡಿರುವ ವಿಚಾರಕ್ಕೆ ಗರಂ ಆಗಿರುವ ಸಿಬ್ಬಂದಿ ನಗರದ ಮೇರಿಹಿಲ್ ನಲ್ಲಿರುವ ಗೃಹರಕ್ಷಕದಳದ ಕಚೇರಿಯ ಮುಂಭಾಗ ಧರಣಿ ನಡೆಸಿರುವ ಘಟನೆ ನಡೆದಿದೆ.

ಕೊರೋನಾ ವಾರಿಯರ್ ಗಳಾಗಿ ದುಡಿದಿರುವ ಗೃಹರಕ್ಷಕದಳದ ಸಿಬ್ಬಂದಿಗೆ ಮೂರು ತಿಂಗಳ ವೇತನವೂ ದೊರಕಿಲ್ಲ‌. ಅಲ್ಲದೆ ಕೆಲಸದಿಂದ ವಜಾ ಮಾಡಿರುವ ಸರಕಾರದ ಈ ಆದೇಶದಿಂದ ಗೃಹರಕ್ಷಕ ದಳದ ಸಿಬ್ಬಂದಿ ಅತಂತ್ರರಾಗಿದ್ದಾರೆ.

ಇತ್ತೀಚೆಗೆ ರಾಜ್ಯ ಸರಕಾರ ಗೃಹರಕ್ಷಕ ದಳದಲ್ಲಿ ಸಿಬ್ಬಂದಿಯ ಸಂಖ್ಯೆ ಕಡಿಮೆ ಮಾಡುವಂತೆ ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು ಒಂದು ಸಾವಿರದಷ್ಟು ಗೃಹರಕ್ಷಕ ದಳದ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು‌. ಇದೀಗ ಸರಕಾರದ ಆದೇಶದಂತೆ ಎಸ್ಪಿ ವ್ಯಾಪ್ತಿಯಲ್ಲಿ 250 ಸಿಬ್ಬಂದಿಯ ಪೈಕಿ 80 ಮಂದಿಗೆ ಕೆಲಸ ನೀಡಿ ಉಳಿದವರನ್ನು ವಜಾಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ. ಅದೇ ರೀತಿ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 153 ಸಿಬ್ಬಂದಿಯ ಪೈಕಿ 100 ಮಂದಿಗೆ ಕೆಲಸ ನೀಡುವ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಗೃಹರಕ್ಷಕ ಸಿಬ್ಬಂದಿ ಧರಣಿ ನಡೆಸಿದ್ದಾರೆ.

Comments