ಎಂ ಆರ್ ಪಿ ಎಲ್ ನೂತನ ನಿರ್ದೇಶಕರಾಗಿ ಸಂಜಯ್ ವರ್ಮಾ ಅಧಿಕಾರ ಸ್ವೀಕಾರ


ಮಂಗಳೂರು; ಮಂಗಳೂರಿನ ಪ್ರತಿಷ್ಠಿತ ಎಂಆರ್ ಪಿ ಎಲ್ ಸಂಸ್ಥೆಯ ನಿರ್ದೇಶಕರಾಗಿ ಸಂಜಯ್ ವರ್ಮಾ ಅಧಿಕಾರ ಸ್ವೀಕರಿಸಿದರು.

ಸಂಜಯ್ ವರ್ಮ ರವರು  ರಿಫೈನರಿ ಪೆಟ್ರೋಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಕ್ಷೇತ್ರಗಳಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಗಳ ಅನುಭವವನ್ನು ಹೊಂದಿದ್ದು ಎಂ ಆರ್ ಪಿ ಎಲ್ ನಲ್ಲಿ ಪ್ರಾಜೆಕ್ಟ್ಸ್ ಆಪರೇಶನ್ಸ್ ಮೆಟೀರಿಯಲ್ಸ್ ಯುಟಿಲಿಟೀಸ್ ಮುಂತಾದ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿ ಅನುಭವವನ್ನು ಹೊಂದಿದ್ದಾರೆ

ಅವರು ಇಲ್ಲಿಯವರೆಗೆ ಎಂ ಆರ್ ಪಿ ಎಲ್ ನಲ್ಲಿ ಗ್ರೂಪ್ ಜನರಲ್ ಮ್ಯಾನೇಜರ್ ಇಂಚಾರ್ಜ್ ರಿಫೈನರಿ ಆಗಿದ್ದು ಎಂ ಎಸ್ ಟಿ ಪಿ ಎಲ್ ಸಂಸ್ಥೆಯ ನಿರ್ದೇಶಕರು ಸಹ ಆಗಿದ್ದಾರೆ. ಜಬಲ್ಪುರ್ ನ  ಇಂಜಿನಿಯರಿಂಗ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಮೆಕ್ಯಾನಿಕಲ್ ಮಾಡಿದ  ಅವರು ಇಂಡೋಗಲ್ಫ್ ಫರ್ಟಿಲೈಸರ್ಸ್,  ರಿಲಯನ್ಸ್ ಇಂಡಸ್ಟ್ರೀಸ್ ಮುಂತಾದ ಪ್ರಖ್ಯಾತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

Comments