ಮಂಗಳೂರಿನಲ್ಲಿ ಕಾಶಿ ಮಠಾಧೀಶರ ಚಾತುರ್ಮಾಸ ವ್ರತ


ಮಂಗಳೂರು : ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಶಾರ್ವರಿ ನಾಮ ಸಂವತ್ಸರದ ಚಾತುರ್ಮಾಸ ವ್ರತವು ಈ ಬಾರಿ ಮಂಗಳೂರು ನಗರದ ಕೊಂಚಾಡಿ ಕ್ಷೇತ್ರದಲ್ಲಿರುವ ಶ್ರೀ ಸಂಸ್ಥಾನದ ಶಾಖಾ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ವನಿತಾ ಅಚ್ಚುತ್ ಪೈ ಸಂಭಾಗಣದ ಮೇಲಿನ ಅಂತಸ್ಥಿನಲ್ಲಿರುವ ಶ್ರೀ ಸಂಯಮಿಂದ್ರ ಸಭಾ ಭವನದಲ್ಲಿ ನೆರವೇರಲಿರುವುದು ಈ ಪ್ರಯುಕ್ತ ಚಾತುರ್ಮಾಸ ವ್ರತದ ಸವಿವರ ವಾದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀಗಳವರು  ಗುರುವಾರ ಕೋಟ ಕಾಶಿ ಮಠ ದಲ್ಲಿ ಬಿಡುಗಡೆ ಗೊಳಿಸಿದರು . ಈ ಸಂದರ್ಭದಲ್ಲಿ ಕೊಂಚಾಡಿ ಕಾಶಿ ಮಠದ ವ್ಯವಸ್ಥಾಪಕ ಸಮಿತಿಯ ಶ್ರೀ ವೆಂಕಟರಮಣ ದೇವಳದ ಅಧ್ಯಕ್ಷ ಡಿ . ವಾಸುದೇವ ಕಾಮತ್ , ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಕಸ್ತುರಿ ಸದಾಶಿವ ಪೈ , ಜಿ . ರತ್ನಾಕರ್ ಕಾಮತ್,  ಶಶಿಧರ್ ಪೈ ಮಾರೂರ್ , ಪ್ರಶಾಂತ್ ಪೈ , ದೀಪಕ್ ಕುಡ್ವ ಉಪಸ್ಥಿತರಿದ್ದರು 

 

Comments