ಕೋವಿಡ್ ಆಸ್ಪತ್ರೆಯಾಗಿರುವ ವೆನ್ಲಾಕನ್ನು ತಕ್ಷಣ ಜನರಿಗಾಗಿ ಪುನರಾರಂಭಿಸಿ; ಮಾಜಿ ಸಚಿವ ಖಾದರ್ ಆಗ್ರಹಮಂಗಳೂರು; ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದ ನಂತರ ಜನಸಾಮಾನ್ಯರಿಗೆ ಚಿಕಿತ್ಸೆ ಪಡೆಯಲು ಕಷ್ಟವಾಗಿದ್ದು ಸರಕಾರಕ್ಕೆ ಜನರ ಬಗ್ಗೆ ಕಾಳಜಿಯಿದ್ದರೆ ತಕ್ಷಣದಿಂದಲೇ ವೆನ್ಲಾಕ್ ಆಸ್ಪತ್ರೆ ಪುನರಾರಂಭಿಸುವಂತೆ ಮಾಜಿ ಸಚಿವ ಯು ಟಿ ಖಾದರ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಮಾಡುವಾಗ ಜನರಿಗೆ  ಸಮಸ್ಯೆ ಆಗಲಿದೆ ಎಂದು ಎಚ್ಚರಿಸಿದ್ದೆ. ಆದರೆ ಯಾರಲ್ಲೂ ಚರ್ಚಿಸದೆ ಕೋವಿಡ್ ಆಸ್ಪತ್ರೆ ಮಾಡಿದ್ದಾರೆ.ವೆನ್ಲಾಕ್ ಗೆ ಬರುವವರನ್ನು ಖಾಸಗಿ ಆಸ್ಪತ್ರೆಗೆ ಸರಕಾರಿ ದರದಲ್ಲಿ ಕಳುಹಿಸುತ್ತೇವೆ ಅಂದಿದ್ದರು. ಆದರೆ ಖಾಸಗಿ ಆಸ್ಪತ್ರೆಗೆ ಸರಿಯಾಗಿ ಹಣ ಪಾವತಿಯಾಗಿಲ್ಲ.  ಎಪಿಎಲ್ , ಬಿಪಿಎಲ್ ನವರು ಹಣ ಕಟ್ಟಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಬಂದಿದೆ ಎಂದರು.
ವೆನ್ಲಾಕ್ ಆಸ್ಪತ್ರೆಯ ಕೋವಿಡ್ ಬ್ಲಾಕ್ ಉಳಿಸಿಕೊಂಡು ಹಳೆ ಕಟ್ಟಡದಲ್ಲಿ ಮೊದಲಿನಂತೆ, ಒಪಿಡಿ,ಫಾರ್ಮಸಿ, ಡಯಾಲಿಸಿಸ್ ಸೆಂಟರ್ ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು.

Comments