ಮಂಗಳೂರಿನಲ್ಲಿ ವಿಮಾನದ ಸಿಬ್ಬಂದಿಯಲ್ಲಿ‌ ಕಾಣಿಸಿಕೊಂಡ ಸೋಂಕು


ಮಂಗಳೂರು;  ಮಂಗಳೂರಿನಲ್ಲಿ ವಿಮಾನ‌ದ ಸಿಬ್ಬಂದಿಗೆ  ಕೊರೊನಾ ಪತ್ತೆಯಾಗಿದೆ.
ಇಂದು ಪತ್ತೆಯಾದ ನಾಲ್ಕು ಪ್ರಕರಣಗಳಲ್ಲಿ ಒಂದು ವಿಮಾನದ ಸಿಬ್ಬಂದಿಯಾಗಿದ್ದಾರೆ.ಇವರು ಫೆ. 20 ರಂದು ಆಗಮಿಸಿದ ವಿಮಾನದ ಸಿಬ್ಬಂದಿಯಾಗಿದ್ದಾರೆ.  ನಾಗರಿಕ ವಿಮಾನಯಾನ ಸಚಿವಾಲಯದ ನಿಯಮಾವಳಿಯಂತೆ ಪುನ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಕೋವಿಡ್ ಪರೀಕ್ಷೆಗೆ ಒಳಪಡಬೇಕಾಗಿತ್ತು. ಅದರಂತೆ ಪರೀಕ್ಷೆ ಮಾಡುವಾಗ ಇಂದು ಪಾಸಿಟಿವ್ ಬಂದಿದೆ.
ಇನ್ನೊಬ್ಬರು ಸುರತ್ಕಲ್ ಮಹಿಳೆ ಫೆಬ್ರವರಿ ತಿಂಗಳಿನಲ್ಲಿ ಬೆಹರೈನ್ ನಿಂದ ಬಂದಿದ್ದರು. ಇವರು ಪುನಃ ಬೆಹರೈನ್ ಗೆ ಹಿಂದಿರುಗಲು ನಿರ್ಧರಿಸಿದ್ದು ಈ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ಪತ್ತೆಯಾಗಿದೆ.

Comments