ಮಾರ್ನಬೈಲ್ ನಲ್ಲಿ ಕಂಬಕ್ಕೆ ಡಿಕ್ಕಿಯಾಗಿ ಮರದ ದಿಮ್ಮಿ ಸಾಗಾಟದ ಲಾರಿ ಪಲ್ಟಿ


ಬಂಟ್ವಾಳ;ಮೇಲ್ಕಾರ್ ಸಮೀಪ ಮಾರ್ನಬೈಲ್ ಎಂಬಲ್ಲಿ ಕಂಬಕ್ಕೆ ಢಿಕ್ಕಿಯಾಗಿ ಮರದ ದಿಮ್ಮಿ ಸಾಗಾಟದ ಲಾರಿ ಪಲ್ಟಿಯಾದ ಘಟನೆ ನಡೆದಿದೆ.

 ಶುಕ್ರವಾರ ಬೆಳಗ್ಗೆ ಮರದ ದಿಮ್ಮಿಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಉರುಳಿಬಿದಿದ್ದೆ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ.  ಲಾರಿ ಸಂಪೂರ್ಣ ಜಖಂಗೊಂಡಿದ್ದು, ಮೂರು ವಿದ್ಯುತ್ ಕಂಬಗಳು ಬಿದ್ದಿದೆ. ಬಂಟ್ವಾಳ ಟ್ರಾಫಿಕ್ ಎಸ್.ಐ. ರಾಜೇಶ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು.

Comments