ಶೋಭಾ ಕರಂದ್ಲಾಜೆ ಟ್ವೀಟರ್ ಖಾತೆ ಹ್ಯಾಕ್ ಮಾಡಿದ ವಿಚಾರ ತನಿಖೆ ಮಾಡಿ-ಯು.ಟಿ ಖಾದರ್ ಒತ್ತಾಯ

ಮಂಗಳೂರು ;  ಪಾಣೆ ಮಂಗಳೂರಿನಲ್ಲಿ ಯುವಕ ಆತ್ಮಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸಂಸದೆ ಶೋಭಾ ಕರಂದ್ಲಾಜೆ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಮಾಜಿ ಸಚಿವ ಯು ಟಿ ಖಾದರ್ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಇಂದು ಕಾಂಗ್ರೆಸ್ ನಿಯೋಗವು ಕೊರೊನಾ ವಿಚಾರದಲ್ಲಿ ಸಚಿವರ ಜೊತೆ ಸಭೆ ನಡೆಸಿದ ಬಳಿಕ ಸಚಿವರೊಂದಿಗೆ ಮಾತನಾಡಿದ ಖಾದರ್ ಅವರು ಪಾಣೆಮಂಗಳೂರು ಗೂಡಿನಬಳಿಯಲ್ಲಿ ಮುಸ್ಲಿಂ ಯುವಕರು ಹಿಂದೂ ಯುವಕನನ್ನು ರಕ್ಷಿಸಿದ ವಿಚಾರದಲ್ಲಿ ಶೋಭ ಕರಂದ್ಲಾಜೆ ಹೆಸರಿನ ಟ್ವೀಟ್ ನಲ್ಲಿ ಜೆಹಾದಿಗಳಿಂದ ಹತ್ಯೆ ಎಂದು ಬರೆದಿತ್ತು. ಅದನ್ನು ರೀಟ್ವೀಟ್ ಮಾಡಿ ನನ್ನ ಅಭಿಪ್ರಾಯ ಹೇಳಿದ್ದೆ.ಬಳಿಕ ಶೋಭ ಕರಂದ್ಲಾಜೆ ಟ್ವೀಟ್  ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.ಈ ಬಗ್ಗೆ ತನಿಖೆ ನಡೆಯಬೇಕು ಎಂದರು.

Comments