ಕಡಬದಲ್ಲಿ ಯುವಕ ನಾಪತ್ತೆಮಂಗಳೂರು :- ಯುವಕ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ನೇರೋಡಿ ಮನೆಯ  ಶೀನಪ್ಪ ಎಂಬವರ ಪುತ್ರ  ಪೃಥ್ವಿ (20) ಎಂಬ ಯುವಕ ಕಾಣೆಯಾದವನು. ಈತ ಮಂಗಳೂರಿನ ಮಹಾಲಸ ಚಿತ್ರಕಲಾ ಶಾಲೆಯ ವಿದ್ಯಾರ್ಥಿಯಾಗಿದ್ದು, ಕದ್ರಿ ಸರಕಾರಿ ಹಾಸ್ಟೆಲ್‍ನಲ್ಲಿ ವಾಸ್ತವ್ಯವಿದ್ದನು. ಮೇ 12ರಂದು ಕಡಬದ ತನ್ನ ಮನೆಯಿಂದ ಹೋಗಿದ್ದು, ಉಡುಪಿಯ ಸ್ನೇಹಿತೆಯ ಸಂಬಂಧಿಕರ ಜತೆಯಲ್ಲಿ ಇರುವುದಾಗಿ ತಿಳಿಸಿದ್ದನು. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಆತನ ಇರುವಿಕೆಯ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ದೊರಕಿಲ್ಲ ಎಂದು ಆತನ ತಂದೆ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
   ಕಾಣೆಯಾದ ಯುವಕನ ಚಹರೆ ಇಂತಿವೆ:- ಎತ್ತರ 4.8, ಸಪೂರ ದೇಹ, ಎಣ್ಣೆ ಕಪ್ಪು ಮೈಬಣ್ಣ. ಧರಿಸಿರುವ ಬಟ್ಟೆ-ಕಪ್ಪು ಟೀ ಶರ್ಟ್ ಮತ್ತು ತಿಳಿ ನೀಲಿ ಜೀನ್ಸ್ ಬರ್ಮುಡ ಚಡ್ಡಿ, ಮಾತನಾಡುವ ಭಾಷೆ-ಕನ್ನಡ, ತುಳು.
              ಕಾಣೆಯಾದ ಯುವಕನ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಕಡಬ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08251260044, 08251251055, 8251230500, 8242220500, 824222051 ನ್ನು ಸಂಪರ್ಕಿಸಲು ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.

Comments