ಪಂಪ್ ವೆಲ್ ಸೇತುವೆ ಗೆ ವೀರಸಾವರ್ಕರ್ ನಾಮಕರಣ- ಮಹಾವೀರರಿಗೆ ಮಾಡಿದ ಅವಮಾನ; ಯು ಟಿ ಖಾದರ್ಮಂಗಳೂರು; ಪಂಪ್ ವೆಲ್ ಮೇಲ್ಸೇತುವೆಯಲ್ಲಿ ನಿನ್ನೆ ರಾತ್ರಿ ವೀರಸಾವರ್ಕರ್ ಹೆಸರು ಇಟ್ಟು ಹಾಕಿದ ಬ್ಯಾನರ್ ಮಹಾವೀರ ರಿಗೆ ಮಾಡಿದ ಅವಮಾನ ಎಂದು ಯು ಟಿ ಖಾದರ್ ತಿಳಿಸಿದ್ದಾರೆ.
ಪಂಪ್ ವೆಲ್ ಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಮಹಾವೀರ ಸರ್ಕಲ್ ಎಂದು ನಾಮಕರಣ ಮಾಡಿ ಪವಿತ್ರ ಕಳಸದ ಬೃಹತ್ ಮೂರ್ತಿ ನಿರ್ಮಿಸಲಾಗಿತ್ತು. ಪ್ಲೈ ಓವರ್ ನಿರ್ಮಾಣದ ವೇಳೆ ಅದನ್ನು ಮೂಳೆಗುಂಪು ಮಾಡಲಾಗಿದೆ. ಮಹಾವೀರ ಅವರ ತತ್ವಾದರ್ಶಗಳನ್ನು ಇಟ್ಟುಕೊಂಡು ಮಾಡಲಾದ ಮಹಾವೀರ ವೃತ್ತ ಎಂದು ಹೆಸರಿಟ್ಟಿರುವಾಗ ಬೇರೆ ಹೆಸರು ಹೇಗೆ ಬರುತ್ತದೆ. ಇದು ಮಹಾವೀರರಿಗೆ ಮಾಡಿದ ಅವಮಾನ. ಇದನ್ನು ಹಾಕಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಫ್ಲೆಕ್ಸ್ ಪ್ರಿಂಟ್ ಮಾಡಿದವರ ಮೇಲೂ ಕ್ರಮ ಕೈಗೊಳ್ಳಬೇಕು‌. ಪ್ರಚೋದನೆ ಕೊಟ್ಟವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಶಾಸಕ, ಸಂಸದ, ಸಚಿವರು ಕ್ರಮ ತೆಗೆದುಕೊಳ್ಳದಿದ್ದರೆ ಅವರು ಭಾಗಿ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದರು.

Comments