ಸುರತ್ಕಲ್ ನಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲು   
ಸುರತ್ಕಲ್: ಮಂಗಳೂರಿನ  ಸುರತ್ಕಲ್ ನ ಕೃಷ್ಣಾಪುರ ಎಂಬಲ್ಲಿ ಸಣ್ಣ ಕೆರೆಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲಾದ ಘಟನೆ ನಡೆದಿದೆ‌

ಇಂದು ಮಧ್ಯಾಹ್ನ ಈ ಘಟನೆ ನಡೆದಿದ್ದು ಈಜಲು ತೆರಳಿದ ಯುವಕನಿಗೆ ಈಜಲು ಸಾಧ್ಯವಾಗದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸುರತ್ಕಲ್  ನಿವಾಸಿ ತಾರನಾಥ್ ಎಂಬವರ ಪುತ್ರ ಸಂತೋಷ್(20) ಮೃತಪಟ್ಟ ಯುವಕ.
ಸಂತೋಷ್ ಸ್ನೇಹಿತರ ಜೊತೆ ಇಂದು ಮಧ್ಯಾಹ್ನ ಕೃಷ್ಣಾಪುರ ಬಳಿಯ ಕೆರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ನೀರುಪಾಲಾಗಿದ್ದಾರೆ .ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments