ಕಾಂಗ್ರೆಸ್ ನಾಯಕನ ಆಶೀರ್ವಾದ ಪಡೆದ ಬಿಜೆಪಿ ನಾಯಕ


ಮಂಗಳೂರು; ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರ ಕಾಲಿಗೆ ಬಿದ್ದು ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ ಆಶೀರ್ವಾದ ಪಡೆದುಕೊಂಡಿದ್ದಾರೆ.

ಕಿಯೋನಿಕ್ಸ್ ಅಧ್ಯಕ್ಷರಾಗಿ ನೇಮಕಗೊಂಡ ಬಿಜೆಪಿ ಮುಖಂಡ ಕೆ.ಹರಿಕೃಷ್ಣ ಬಂಟ್ವಾಳ್ ಬುಧವಾರ ಬಂಟ್ವಾಳದಲ್ಲಿರುವ ಕೇಂದ್ರ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕರೂ ಆಗಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ಬಿ.ಜನಾರ್ದನ ಪೂಜಾರಿ ಅವರ ಆಶೀರ್ವಾದ ಪಡೆದರು.
ಜನಾರ್ದನ ಪೂಜಾರಿ ಅವರ ಒಡನಾಡಿಯಾಗಿದ್ದ ಹರಿಕೃಷ್ಣ ಬಂಟ್ವಾಳ್, ಕಿಯೋನಿಕ್ಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ, ಬಂಟ್ವಾಳದ ತನ್ನ ಮನೆಗೆ ಬುಧವಾರ ಬೆಳಗ್ಗೆ ಬಂದಿದ್ದು, ಮೊದಲ ಕಾರ್ಯಕ್ರಮವಾಗಿ ತನ್ನ ರಾಜಕೀಯ ಗುರು ಜನಾರ್ದನ ಪೂಜಾರಿ ಅವರ ಆಶೀರ್ವಾದ ಬೇಡಿದರು. ಈ ಸಂದರ್ಭ ಮುಕ್ತಮನಸ್ಸಿನಿಂದ ಹರಸಿದ ಜನಾರ್ದನ ಪೂಜಾರಿ, ಪಾರದರ್ಶಕವಾದ ಆಡಳಿತ ನಡೆಸಿ, ಜನರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗುವಂತೆ  ಸಲಹೆ ನೀಡಿದರು.

Comments