ಆರು ಬಾರಿ ಟೆಸ್ಟ್ ಮಾಡಿದರೂ ಕೊರೊನಾ ಪಾಸಿಟಿವ್ : ಮಂಗಳೂರಿನಲ್ಲಿ ವೈದ್ಯರಿಗೆ ಸವಾಲಾಗಿದೆ ಎರಡು ಕೇಸ್!ಮಂಗಳೂರು; ಮಂಗಳೂರಲ್ಲಿ ಇಬ್ಬರು ವೃದ್ದರ ಕೊರೊನಾ  ಕೇಸ್ ವೈದ್ಯರಿಗೆ ಸವಾಲಾಗಿಬಿಟ್ಟಿದೆ.
ಇಬ್ಬರು ವೃದ್ದ ಕೊರೊನಾ ಸೋಂಕಿತರು ಆರು ಬಾರಿ ಕೊರೊನಾ ಟೆಸ್ಟ್ ಮಾಡಿಸಿದರೂ ಅದು ಪಾಸಿಟಿವ್ ಬರುತ್ತಿರುವುದು ವೈದ್ಯರಿಗೆ ಸವಾಲಾಗಿದೆ.

ಮೇ 12ರಂದು ದುಬೈನಿಂದ ಬಂದಿದ್ದ 81 ವರ್ಷದ ವೃದ್ಧ ಹಾಗೂ ಮೇ.18ರಂದು ದುಬೈನಿಂದ ಬಂದಿದ್ದ 76 ವರ್ಷದ ವೃದ್ದರಲ್ಲಿ ಕೋವಿಡ್ ಸೋಂಕು ಲಕ್ಷಣ ಕಾಣಿಸಿಕೊಂಡಿತ್ತಿ. ಕಳೆದೊಂದು ತಿಂಗಳಿನಿಂದ ಇವರಿಬ್ಬರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡುತ್ತಿದ್ದರೂ ಡಿಸ್ವಾರ್ಜ್ ಭಾಗ್ಯ ಇನ್ನೂ ಸಿಕ್ಕಿಲ್ಲ. ಇವರಿಬ್ಬರಲ್ಲೂ ರೋಗ ಲಕ್ಷಣವಿಲ್ಲದೇ ಆರೋಗ್ಯವಾಗಿದ್ದರೂ ಕೊರೋನಾ ಮಾತ್ರ ಬಿಟ್ಟು ಹೋಗುತ್ತಿಲ್ಲ. ಆಸ್ಪತ್ರೆಯಲ್ಲಿ ಆರು ಬಾರಿ ಟೆಸ್ಟ್ ನಡೆಸಿದರೂ ಇವರ ವರದಿ ಪಾಸಿಟಿವ್ ಬರುತ್ತಿದೆ. ವರದಿ ನೆಗೆಟಿವ್ ಬಾರದೇ ಡಿಸ್ವಾರ್ಜ್ ಆಗದೇ ಇವರಿಬ್ಬರು ಆಸ್ಪತ್ರೆಯಲ್ಲೇ ಇದ್ದಾರೆ. ಹೀಗಾಗಿ ಇವರಿಬ್ಬರು
ಕಳೆದೊಂದು ತಿಂಗಳಿನಿಂದ ಆಸ್ಪತ್ರೆಯಲ್ಲೇ ಇದ್ದು ಒತ್ತಡಕ್ಕೆ ಒಳಗಾಗಿದ್ದಾರೆ. 
81 ವರ್ಷ ವೃದ್ದನ ಪತ್ನಿ, ಮಗಳು ಪಾಸಿಟಿವ್ ಆಗಿದ್ದರೂ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

Comments