ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಸಾದ ತಿಂದ ಮಂಗಗಳು; ಪೊಟೋ ವೈರಲ್


ಮಂಗಳೂರು; ಈಗಾಗಲೇ ದೇವಸ್ಥಾನಗಳಲ್ಲಿ ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.. ಆದರೆ ದೇವಸ್ಥಾನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.. ಇದಕ್ಕಾಗಿಯೇ ದೇಗುಲಗಳಲ್ಲಿ ಬಣ್ಣದಿಂದ ಬಾಕ್ಸ್ ‌ಗಳನ್ನು ಬಳಿಯಲಾಗಿದೆ.. ಆದ್ರೆ ಇಲ್ಲೊಂದು ದೇವಸ್ಥಾನದಲ್ಲಿ ಕೋತಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಅದರ ಮೇಲೆ ಕುಳಿತ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಾರೀ ಮೆಚ್ಚುಗೆ ಗಳಿಸಿದೆ.. ಹೌದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ‌ ಶ್ರೀಕಾರಿಂಜೇಶ್ವರ ದೇವಸ್ಥಾನ ವಾನರರಿಗೆ ಪ್ರಸಿದ್ದ.. ದೇವಸ್ಥಾನ ಬಳಿ ನೂರಾರು ಮಂಗಗಳು ಇವೆ.. ದೇವರಿಗೆ ಮೂರು ಸೇರು ನೈವೇದ್ಯ ಸಮರ್ಪಣೆ ಮಾಡಿದ ಬಳಿಕ ಅದನ್ನು ದೇವಸ್ಥಾನದಲ್ಲಿ ಇರುವ ಚಪ್ಪಡಿ ಕಲ್ಲಿಗೆ ಹಾಕಲಾಗುತ್ತದೆ ಇದನ್ನು ನೂರಾರು ಕೋತಿಗಳು ಬಂದು ತಿನ್ನುತ್ತವೆ. ಅಲ್ಲದೇ ಭಕ್ತರು ಹಣ್ಣುಕಾಯಿ, ಬಾಳೆಹಣ್ಣು ನೀಡಿ ಸಂತೋಷ ಪಡುತ್ತಾರೆ.. ಸದ್ಯ ಸುರಕ್ಷಿತ ದೃಷ್ಟಿಯಿಂದ ದೇಗುಲದ ಪ್ರಾಂಗಣದಲ್ಲಿ ಬಾಕ್ಸ್ ರಚಿಸಿದ್ದು, ಅದರಲ್ಲಿ ಅದರಲ್ಲಿ ಭಕ್ತರು ಇಟ್ಟು ಪ್ರಸಾದವನ್ನು ಕೋತಿಗಳು ಚೌಕಟ್ಟಿನ ಒಳಗೆ ಕುಳಿತು ತಿನ್ನುವ ಪೋಟೋ ಭಕ್ತರೊಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಡಿದ್ದಾರೆ. ಇದು ಬಾರೀ ವೈರಲ್ ಆಗಿದೆ..

Comments