ಮಂಗಳೂರಿನಲ್ಲಿ ಕಸ ತೆರಿಗೆ ಹೆಚ್ಚಳ: ಕಾಂಗ್ರೆಸ್ ನಿಂದ ಆಕ್ರೋಶ


ಮಂಗಳೂರು:  ಮಂಗಳೂರು ಮಹಾನಗರ ಪಾಲಿಕೆಯು ತ್ಯಾಜ್ಯ ತೆರಿಗೆಯನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದ್ದು ಈ ಮೂಲಕ ಜನರ ಮೇಲೆ ಹೆಚ್ಚುವರಿ ತೆರಿಗೆಯ ಹೊರೆ ಹೇರಿದೆ ಎಂದು ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಆಕ್ರೋಶ ವ್ಯಕ್ತಪಡಿಸಿದರು

 ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೊರೋನ ಲಾಕ್‌ಡೌನ್‌ನಿಂದ ಆರ್ಥಿಕ ವ್ಯವಹಾರಗಳು ಸ್ಥಗಿತವಾಗಿದೆ. ಜನರು ಸಂಕಷ್ಟದಲ್ಲಿರುವ ವೇಳೆ ತೆರಿಗೆ ವಿನಾಯಿತಿ ನೀಡುವ ಮೂಲಕ ಜನರಿಗೆ ಸಹಕಾರ ನೀಡಬೇಕಾಗಿದ್ದ  ಮನಪಾದಲ್ಲಿ 2015-16ರಲ್ಲಿ ಮರುಪರಿಶೀಲನೆ ಮಾಡಿ ಜಾರಿಗೊಳಿಸಲಾಗಿದ್ದ 500 ಚದರ ಅಡಿಗೆ ವಾರ್ಷಿಕ ₹ 180 ಗಳಂತೆ ನಿಗದಿಪಡಿಸಲಾಗಿದ್ದ ತ್ಯಾಜ್ಯ ತೆರಿಗೆಯನ್ನು ಎಪ್ರಿಲ್‌ನಿಂದ 600 ರೂಪಾಯಿಗೆ ಏರಿಕೆ ಮಾಡಲಾಗಿದೆ. ಕೊರೋನ ನೆಪವೊಡ್ಡಿ ಅದರ ಲಾಭವನ್ನು ಮನಪಾ ಪಡೆಯುತ್ತಿರುವುದು ಖಂಡನೀಯ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

Comments