ಸೆಂಟ್ರಲ್ ಮಾರುಕಟ್ಟೆ ಗೊಂದಲವನ್ನು ಜಿಲ್ಲಾಡಳಿತ ಶೀಘ್ರ ಬಗೆಹರಿಸಲಿ ;ಖಾದರ್


ಮಂಗಳೂರು: ಸೆಂಟ್ರಲ್ ಮಾರುಕಟ್ಟೆ ವಿಚಾರದಲ್ಲಿ ಜಿಲ್ಲಾಡಳಿತ ಹಾಗೂ ಮಂಗಳೂರು ಮನಪಾಕ್ಕೆ ಸ್ಪಷ್ಟ ನಿಲುವು ಇರದೆ ಗೊಂದಲ ಸೃಷ್ಟಿಸುತ್ತಿದೆ. ಆದ್ದರಿಂದ ತಕ್ಷಣ ಜಿಲ್ಲಾಡಳಿತ ಈ ಬಗ್ಗೆ ಸಭೆ ಕರೆದು ಸ್ಪಷ್ಟನೆ ನೀಡಲಿ ಎಂದು ಮಾಜಿ ಸಚಿವ‌ ಯು.ಟಿ.ಖಾದರ್ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್ ನಲ್ಲಿ‌ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸೆಂಟ್ರಲ್ ಮಾರುಕಟ್ಟೆ ಎಪಿಎಂಸಿಗೆ ಸ್ಥಳಾಂತರ ಮಾಡುವುದಾದಲ್ಲಿ ಮೊದಲಿಗೆ ಅಲ್ಲಿ ಸರಿಯಾದ ಮೂಲಭೂತ ಸೌಕರ್ಯ ಗಳ ವ್ಯವಸ್ಥೆ ಮಾಡಲಿ. ಅಲ್ಲದೆ ಎಷ್ಟು ಸಮಯದ ಒಳಗೆ ಸೆಂಟ್ರಲ್ ಮಾರುಕಟ್ಟೆ ಪುನರ್ನಿರ್ಮಾಣ ವಾಗಲಿದೆ. ಆ ಬಳಿಕ ನೂತನ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ಮತ್ತೆ ಅಂಗಡಿಗಳನ್ನು ನೀಡಲಾಗುತ್ತಿದೆ  ಎಂದು ಬರವಣಿಗೆ ಮೂಲಕ ಸ್ಪಷ್ಟಪಡಿಸಲಿ ಎಂದು ಹೇಳಿದರು.

ಮಾರುಕಟ್ಟೆ ಸ್ಥಳಾಂತರ ಮಾಡುವ ಸಂದರ್ಭ ನಮ್ಮನ್ನು ಕರೆಯದೆ ಶಾಸಕರು, ಸಂಸದರು ಹಾಗೂ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಆದರೆ ಇದೀಗ ವ್ಯಾಪಾರಿಗಳಿಗೆ ಸಮಸ್ಯೆಗಳು ತಲೆದೋರಿರುವ ಸಂದರ್ಭದಲ್ಲಿ ಯಾರೂ ಇತ್ತ ತಲೆಹಾಕುತ್ತಿಲ್ಲ. ಸೆಂಟ್ರಲ್ ಮಾರುಕಟ್ಟೆ ಸ್ಥಳಾಂತರ ದಿಂದ ವ್ಯಾಪಾರಿಗಳು ಮಾತ್ರವಲ್ಲ ಜನಸಾಮಾನ್ಯರಿಗೂ ಸಮಸ್ಯೆಯಾಗಿದೆ. ಆದ್ದರಿಂದ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ತಕ್ಷಣ ಈ ಸಮಸ್ಯೆಯನ್ನು ಬಗೆಹರಿಸಲಿ ಎಂದು ಯು.ಟಿ.ಖಾದರ್ ಹೇಳಿದರು.

Comments