ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನ


ಬೆಂಗಳೂರು; ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಬೆಂಗಳೂರಿನ ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಉಸಿರಾಟದ ತೊಂದರೆಯಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿರಂಜೀವಿ ಸರ್ಜಾ ಚಿರು ಚಿತ್ರದ ಬಳಿಕ ಚಿರು ಎಂದೇ ಗುರುತಿಸಲ್ಪಟ್ಟಿದ್ದರು. ಇವರು ಬಹುಭಾಷ ನಟ ಅರ್ಜುನ್ ಸರ್ಜಾ ಸೋದರಳಿಯ. ವಾಯುಪುತ್ರ ಸಿನಿಮಾ‌ ಮೂಲಕ‌ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಕೆಂಪೇಗೌಡ, ದಂಡಂ ದಶಗುಣಂ , ವರದನಾಯಕ, ಸಿಂಗ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
1980 ಅಕ್ಟೋಬರ್ 17 ರಂದು ಜನಿಸಿದ್ದ ಇವರಿಗೆ 40 ವರ್ಷ ವಯಸ್ಸಾಗಿತ್ತು.
ನಟಿ ಮೇಘನಾರಾಜ್ ಜೊತೆಗೆ 2018 ರಲ್ಲಿ ವಿವಾಹವಾಗಿತ್ತು.

Comments