ಬಂಗ್ರಕೂಳೂರು ವಾರ್ಡಿನ ರಾಜಕಾಲುವೆ ಒತ್ತುವರಿ ತೆರವು


ಮಂಗಳೂರು;ಬಂಗ್ರಕೂಳೂರು ವಾರ್ಡಿನ ರಾಜಕಾಲುವೆ ಒತ್ತುವರಿ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಮೇಯರ್ ದಿವಾಕರ್ ಪಾಂಡೇಶ್ವರ್ ಹಾಗೂ ಮನಪಾ ಸದಸ್ಯರು ಅಧ್ಯಕ್ಷರು ತೆರಿಗೆ ಹಣಕಾಸು ಹಾಗೂ ಅಪೀಲು   ಸ್ಥಾಯಿ ಸಮಿತಿ  ಕಿರಣ್ ಕುಮಾರ್ ರವರು ಕಾರ್ಯಾಚರಣೆ ನಡೆಸಿದರು.ಕೂಳೂರು ರಾಷ್ಟ್ರೀಯ ಹೆದ್ದಾರಿ ಬದಿ ಹಾದುಹೋಗಿರುವ ರಾಜ ಕಾಲುವೆಯನ್ನು ಖಾಸಗಿ ಜಾಗದವರು  ಒತ್ತುವರಿ ಮಾಡಿಕೊಂಡಿದ್ದು, ಇಂದು ಮನಪಾ ಅಧಿಕಾರಿಗಳ ನೇತೃತ್ವದಲ್ಲಿ ಅನಧಿಕೃತ ಒತ್ತುವರಿಯಾದ ರಾಜಕಾಲುವೆಗೆ ಹಾಕಿರುವ ಪೈಪ್ ತೆರವು ಮಾಡಲಾಯಿತು. ಇನ್ನು ಮನಪಾ ಜಾಗದಲ್ಲಿ ಅನಧಿಕೃತವಾಗಿ  ಒತ್ತುವರಿ ಆದ್ರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಿದರು.

Comments