ಕಾವಳಕಟ್ಟೆ ಬಳಿ ಅಪರೂಪಕ್ಕೆ ಕಾಣಸಿಗುವ ಬಿಳಿ ಹೆಬ್ಬಾವು ಪತ್ತೆ


ಬಂಟ್ವಾಳ;ಬಂಟ್ವಾಳ  ತಾಲೂಕಿನ ಕಾವಳಕಟ್ಟೆಯ ಮನೆಯೊಂದರ ಬಳಿ ಬಿಳಿ ಬಣ್ಣದ ಹೆಬ್ಬಾವೊಂದು  ಕಾಣಸಿಕ್ಕಿದೆ.

ಅಪರೂಪಕ್ಕೆ ಕಾಣಸಿಗುವ ಈ ಹೆಬ್ಬಾವನ್ನು  ಸುರಕ್ಷಿತವಾಗಿ ಪಿಲಿಕುಳಕ್ಕೆ ಕಳುಹಿಸಿಕೊಡಲಾಗಿದೆ. ಬಂಟ್ಬಾಳದ ಕಾವಳಕಟ್ಟೆ ನಿವಾಸಿ ನೌಶಾದ್ ಅವರ ಮನೆಯಲ್ಲಿ ಈ ಹೆಬ್ಬಾವು ಕಂಡುಬಂದಿದ್ದು, ತಕ್ಷಣ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಲಾಯಿತು. ಅವರು ಸ್ಥಳಕ್ಕೆ ಭೇಟಿ ನೀಡಿ ಛಾಯಾಗ್ರಾಹಕರಾದ ನಿತ್ಯಪ್ರಕಾಶ್ ಬಂಟ್ವಾಳ ಹಾಗೂ ಪ್ರಸಾದ್ ಅವರ ಸಹಕಾರದಿಂದ ಅದನ್ನು ಯಶಸ್ವಿಯಾಗಿ ಹಿಡಿದಿದ್ದಾರೆ.

 ಬಿಳಿ ಬಣ್ಣದ ಇಂತಹ ಹೆಬ್ಬಾವು ಸಿಗುವುದು ಅಪರೂಪವಾಗಿದ್ದುಹುಟ್ಟುವಾಗ ಚರ್ಮದ ವರ್ಣದ್ರವ್ಯದ ಕೊರತೆಯ ಹಿನ್ನೆಲೆಯಲ್ಲಿ ಹೀಗಾಗುತ್ತವೆ. ಹೀಗಾಗಿ ಅದನ್ನು "ಆಲ್ಬಿನೊ " ಎನ್ನಲಾಗುತ್ತದೆ.

Comments