ಪಂಪ್ ವೆಲ್ ಮೇಲ್ಸೇತುವೆಗೆ ವೀರಸಾವರ್ಕರ್ ಹೆಸರು; ಚರ್ಚೆಗೆ ಕಾರಣವಾಗಿದೆ ಬ್ಯಾನರ್


ಮಂಗಳೂರು; ಮಂಗಳೂರಿನ ಪಂಪ್ ವೆಲ್ ಮೇಲ್ಸೇತುವೆಯಲ್ಲಿ ಇಂದು ರಾತ್ರಿಯ ಹೊತ್ತಿಗೆ ವೀರ ಸಾವರ್ಕರ್ ಹೆಸರಿನ ಬ್ಯಾನರ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.

ಪಂಪ್ ವೆಲ್ ಮೇಲ್ಸೇತುವೆಯ ಮೇಲೆ ರಾತ್ರಿ ಈ ಬ್ಯಾನರ್ ಹಾಕಲಾಗಿದೆ. ವೀರಸಾವರ್ಕರ್ ಮೇಲ್ಸೇತುವೆ ಪಂಪ್ ವೆಲ್ ಎಂಬ  ಈ ಬ್ಯಾನರ್ ಹಾಕಿದ ಕೆಲವೆ ಹೊತ್ತಿನಲ್ಲಿ ತೆರವು ಮಾಡಲಾಗಿದೆ. ಬ್ಯಾನರ್ ಪಕ್ಕದಲ್ಲಿ ಬಜರಂಗದಳ ಎಂದು ಬರೆಯಲಾಗಿದೆ. ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ವೀರಸಾವರ್ಕರ್ ಹೆಸರಿಡುವ ಬಗ್ಗೆ ವಿವಾದದ ನಡುವೆ ಈ ಬ್ಯಾನರ್ ಕಾಣಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ

Comments