ಕೊರೊನಾ ಸಮಸ್ಯೆ ಬಗ್ಗೆ ಸಚಿವರಿಗೆ ಕಾಂಗ್ರೆಸ್ ನೇತೃತ್ವದ ನಿಯೋಗ ಮನವಿ


ಮಂಗಳೂರು: ಕೊರೋನಾ ಸೋಂಕಿನ ಪರಿಣಾಮ ದ.ಕ.ಜಿಲ್ಲೆಯಲ್ಲಾಗಿರುವ ಸಮಸ್ಯೆಗಳ ಬಗ್ಗೆ ಹಾಗೂ ಜಿಲ್ಲಾಡಳಿತ ಮತ್ತು ಸರಕಾರದಿಂದ ನಡೆಯಬೇಕಾದ ಕಾರ್ಯಯೋಜನೆಗಳ ಬಗ್ಗೆ ಮನವರಿಕೆ ಮಾಡಲು ಶಾಸಕ ಯು.ಟಿ.ಖಾದರ್ ನೇತೃತ್ವದ ಕಾಂಗ್ರೆಸ್ ನಿಯೋಗ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಇಂದು ಮನವಿ ಮಾಡಿದರು.

ಈ ಸಂದರ್ಭ ಕಾಂಗ್ರೆಸ್ ನಿಯೋಗ ಹೊರರಾಜ್ಯ, ಹೊರದೇಶದಲ್ಲಿರುವ ಜನರನ್ನು ಕರೆದುಕೊಂಡು ಬರಬೇಕು. ಬಳಿಕ ಸೂಕ್ತ ತಪಾಸಣೆ ನಡೆಸಿ ಕ್ವಾರಂಟೈನ್ ನಲ್ಲಿ ಇರಿಸಬೇಕು. ನೆಗೆಟಿವ್ ವರದಿ ಬಂದ ಬಳಿಕವೇ ಮನೆಗೆ ಕಳುಹಿಸುವ ವ್ಯವಸ್ಥೆಯಾಗಲಿ. ಖಾಸಗಿ ವಿಮಾನದ ಮೂಲಕ ಭಾರತಕ್ಕೆ ಬರುವವರಿಗೆ ಪರವಾನಿಗೆ ನೀಡಲಿ. ಕಾಸರಗೋಡು- ದ.ಕ.ಜಿಲ್ಲೆ ಗಡಿ ತೆರೆಯಲಿ. ವೆನ್ಲಾಕ್ ಕೋವಿಡ್ ಆಸ್ಪತ್ರೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ, ಕೋವಿಡ್ ಹೊರತಾದ ರೋಗಕ್ಕೆ ಆಸ್ಪತ್ರೆ ಮರು ತೆರೆಯುವಂತಾಗಲಿ ಎಂದು ಸಚಿವರ ಗಮನ ಸೆಳೆದರು.

ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು  ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕಾರ್ಯಯೋಜನೆ ಕೈಗೊಳ್ಳಲಾಗುದು. ಕಾಸರಗೋಡು ಗಡಿ ಸಮಸ್ಯೆಯ ಬಗ್ಗೆ ಈಗಾಗಲೇ ರಾಜ್ಯ ಸರಕಾರದ ಕಾರ್ಯದರ್ಶಿಯವರಲ್ಲಿ ಮಾತನಾಡಿದ್ದು, ಇಂದು ಸಂಜೆಯೊಳಗೆ ಸಮಸ್ಯೆ ಬಗಹರಿಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭ ಐವನ್ ಡಿಸೋಜ, ಹರೀಶ್ ಕುಮಾರ್, ಮಿಥುನ್ ರೈ, ಶುಭೋದಯ ಆಳ್ವ, ಪ್ರಸಾದ್ ಕಾಂಚನ್, ಸದಾಶಿವ ಉಳ್ಳಾಲ ಕಾಂಗ್ರೆಸ್ ನಿಯೋಗದಲ್ಲಿದ್ದರು.

Comments