ಕೊರೊನಾ ನಿಯಂತ್ರಣದಲ್ಲಿ ಕೇಂದ್ರ ವಿಫಲ; ಉಳ್ಳಾಲದಲ್ಲಿ ಸಿಪಿಎಂ ಪ್ರತಿಭಟನೆ


ರಾಷ್ಟ್ರೀಯ ಲಾಕ್ ಡೌನ್ ಮತ್ತು ಕೋವಿಡ್-19 ನಿಯಂತ್ರಣದಲ್ಲಿ ಕೇಂದ್ರ ಸರಕಾರದ ವಿಫಲತೆ ಮತ್ತು ಜನವಿರೋಧಿ ನೀತಿಗಳ ಜಾರಿಯ ವಿರುದ್ಧ ಜೂನ್ 16ರಂದು ದೇಶವ್ಯಾಪ್ತಿ ಪ್ರತಿಭಟನೆ ನಡೆಸಲು ಸಿ.ಪಿ.ಐ.ಎಂ ಪೊಲಿಟ್ ಬ್ಯೂರೋ ಕರೆ ನೀಡಿರುವ ಹಿನ್ನೆಲೆಯಲ್ಲಿ ತೊಕ್ಕೊಟ್ಟು ನಾಡಕಚೇರಿ ಮುಂಭಾಗದಲ್ಲಿ ಸಿ.ಪಿ.ಐ.ಎಂ ಉಳ್ಳಾಲ ವಲಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು.
ಉಳ್ಳಾಲ ವಲಯ ಸಿ.ಪಿ.ಐ.ಎಂ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್ ಮಾತನಾಡಿ ಭಾರತ ಸರಕಾರ ಕೊರೋನಾ ಪಿಡುಗನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಲಾಕ್ ಡೌನ್‍ನಿಂದ ಉಂಟಾದ ದುಷ್ಪರಿಣಾಮಗಳನ್ನು ಎದುರಿಸಲು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಕಾರ್ಮಿಕರಿಗೆ ಕೆಲಸ, ಆಹಾರ, ವಸತಿಯನ್ನು ಪೂರೈಸುವ ಬದಲು ಉದ್ಯೋಗ ಕಡಿತ, ಸಂಬಳ ಕಡಿತ, ಕೆಲಸದ ಅವಧಿ ಹೆಚ್ಚಳದಂತಹ ಕ್ರಮಗಳನ್ನು ಜಾರಿಗೊಳಿಸಿ ಕಾರ್ಮಿಕರ ಮೇಲೆ ದಾಳಿ ಮಾಡುವಂತಹ ವ್ಯವಸ್ಥೆಯನ್ನು ಸರಕಾರ ಮಾಡುತ್ತಿದೆ  ಎಂದರು.
ಸಿ.ಪಿ.ಐ.ಎಂ ಜಿಲ್ಲಾ ಸಮಿತಿ ಸದಸ್ಯ ಜಯಂತ್ ನಾಯಕ್ ಮಾತನಾಡಿ ಕೊರೋನಾ ಲಾಕ್ ಡೌನ್ ಸಂಕಷ್ಟದಿಂದ ಜನಸಾಮಾನ್ಯರು ತತ್ತರಿಸಿರುವ ಈ ಸಂದರ್ಭದಲ್ಲಿ ಆರ್ಥಿಕ ಪ್ಯಾಕೇಜಿನಲ್ಲಿ ಘೋóಣೆಯಾದ 20ಲಕ್ಷ ಕೋಟಿಯಲ್ಲಿ ಕಾರ್ಮಿವರ್ಗದವರಿಗೆ20% ರಿಕ್ಷಾ ಚಾಲಕರಿಗೆ ಕೇವಲ 10% ಮಾತ್ರ ಬಂದಿದೆ, ಇನ್ನು ಉಳಿದ ಹಣವನ್ನು ಯಾವಾಗ ನೀಡುತ್ತೀರಿ, ಬೀಡಿಕಾರ್ಮಿಕರು ಸರಕಾರದ ಲೆಕ್ಕಕ್ಕೆ ಬರುವುದಿಲ್ಲವೇ? ಅಥವಾ ಮಾಲಿಕರು ಯಾಕೆ ಅವರಿಗೆ ಪರಿಹಾರ ನೀಡುತ್ತಿಲ್ಲ? ಮೋದಿಯವರ ಬಾಷಣ ಜನಸಾನ್ಯರಿಗೆ ಪೂರಕವಾಗಿ ಬದುಕುವಂತಹ ಬಾಷಣವಾಗಲಿ, ಬೀದಿಬದಿ ವ್ಯಾಪಾರಸ್ಥರು, ಸೇಲ್ಸ್ ಮೆನ್, ಅಂಗಡಿ ವ್ಯಾಪಾರಿಗಳು, ಟೈಲರ್ ಗಳಿಗೆ ಯಾವಾಗ ಪರಿಹಾರ ನೀಡುತ್ತೀರಿ, ಅವರಿಗೆ ಪರಿಹಾರ ನೀಡಿ ಬದುಕಲು ವ್ಯವಸ್ಥೆ ಮಾಡಿ ಎಂದರು.
ಇದೇ ಸಂದಭದಲ್ಲಿ ತೊಕ್ಕೊಟ್ಟು ನಾಡಕಚೇರಿಯಲ್ಲಿ ಉಪ ತಹಶೀಲ್ದಾರ್ ವಿನಯಾ ಎಸ್.ರಾವ್ ಅವರ ಮುಖೇನ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಿ.ಪಿ.ಐ.ಎಂ ಉಳ್ಳಾಲ ವಲಯ ಸಮಿತಿ ಸದಸ್ಯರಾದ ಪದ್ಮಾವತಿ ಶೆಟ್ಟಿ, ವಿಲಾಸಿನಿ ತೊಕ್ಕೊಟ್ಟು, ಮಹಾಬಲ ದೆಪ್ಪೇಲಿಮಾರ್, ನಾರಾಯಣ ತಲಪಾಡಿ, ಸುಂದರ್ ಕುಂಪಲ, ಬಾಬು ಪಿಲಾರ್, ಸಿ.ಪಿ.ಐ.ಎಂ ಪ್ರಮುಖರಾದ ಶೇಖರ್ ಕುಂದರ್ ಕುತ್ತಾರ್,ಇಬ್ರಾಹಿಂ ಮದಕ, ದಾಸಪ್ಪ ಸಾಲಿಯಾನ್, ಮಾದವ ಸಾಲಿಯಾನ್, ಲಕ್ಷ್ಮಣ ಅಮೀನ್, ಜಯಂತ್ ಬಂಗೇರ, ಬೇಬಿ ತೊಕ್ಕೊಟ್ಟು, ಸರೋಜಿನಿ, ಡಿ.ವೈ.ಎಫ್.ಐ ಪ್ರಮುಖರಾದ ಉಮ್ಮರ್ ಬಾಝಿಕ್ ಮೊದಲಾದವರು ಉಪಸ್ಥಿತರಿದ್ದರು.

Comments