ಮೂಡಾ ಅಧ್ಯಕ್ಷರಾಗಿ ರವಿಶಂಕರ್ ಮಿಜಾರ್ ಅಧಿಕಾರ ಸ್ವೀಕಾರ


ಮಂಗಳೂರು: ಮೂಡಾ ಅಧ್ಯಕ್ಷರಾಗಿ ರವಿಶಂಕರ್ ಮಿಜಾರ್ ಅವರು ಇಂದು ನಗರದ ಉರ್ವಸ್ಟೋರ್ ನಲ್ಲಿರುವ ಮುಡಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು‌. ಮುಂದಿನ ಮೂರು ಮರ್ಷಗಳ ಅವಧಿಗೆ ನೇಮಕ ಆಗುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಸರಕಾರದ ಅಧೀನ ಕಾರ್ಯದರ್ಶಿ  ಸಿ.ಎಸ್.ಕುಮಾರಸ್ವಾಮಿ  ಆದೇಶಿಸಿರುವ ಹಿನ್ನೆಲೆಯಲ್ಲಿ ರವಿಶಂಕರ್ ಮಿಜಾರ್ ಅವರು ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭ ರವಿಶಂಕರ್ ಮಿಜಾರ್ ಮಾತನಾಡಿ, ಮೂಡಾದ ಮೂಲಕ ಕ್ಲಪ್ತ ಸಮಯದಲ್ಲಿ ಕೆಲಸ ಮಾಡುವಂತೆ ಸಂಪೂರ್ಣ ಸಹಕಾರ, ಮುಂದಿನ 30 ವರ್ಷಗಳ ಮಂಗಳೂರಿನ ಅಭಿವೃದ್ಧಿ ಗಮನದಲ್ಲಿರಿಸಿ ಮೂರನೇ ಮಹಾಯೋಜನೆಗೆ ಸಿದ್ಧತೆ, ಮಂಗಳೂರಿನ ಕೆರೆಗಳ ಅಭಿವೃದ್ಧಿ ಮಾಡಿ ನೀರಿನ ಸಾಂದ್ರತೆ ಹೆಚ್ಚಳ, ಉಳ್ಳಾಲದಲ್ಲಿ ನೇತ್ರಾವತಿ ಸೇತುವೆಗೆ ಕಬ್ಬಿಣದ ಬಲೆ ಅಳವಡಿಕೆ, ಮಂಗಳೂರಿನ ಯುವಕ ಯುವತಿಯರಿಗೆ ಇಲ್ಲಿಯೇ ನೌಕರಿ ದೊರಕುವ ರೀತಿಯಲ್ಲಿ ಟೆಕ್ನಾಲಜಿ ಪಾರ್ಕ್ ಅಭಿವೃದ್ಧಿಪಡಿಸುವ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

ಈ ಸಂದರ್ಭ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಡಾ‌.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಮೇಯರ್ ದಿವಾಕರ ಪಾಂಡೇಶ್ವರ, ಮೂಡಾ ಕಮಿಷನರ್ ದಿನೇಶ್ ಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Comments