ಇಂದಿನಿಂದ ಇ ಟಿಕೆಟ್ ಮೂಲಕ ಕಟೀಲು ದೇಗುಲದಲ್ಲಿ ಭಕ್ತರಿಗೆ ದೇವಿಯ ದರ್ಶನ (video )


ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ದೇಗುಲದಲ್ಲಿ ಇಂದಿನಿಂದ ಇ ಟಿಕೆಟ್ ಮೂಲಕ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.


ಎಲ್ಲಾ ದೇವಾಲಯಗಳು ತೆರೆದಿರುವಾಗ ಜೂನ್ 8 ರಂದು ಕಟೀಲು ದೇಗುಲ  ಭಕ್ತರ ಸರತಿ ಸಾಲಿನ ವ್ಯವಸ್ಥೆಯ ಕೊರತೆಯಿಂದ ಭಕ್ತರ ದರ್ಶನಕ್ಕೆ ತೆರೆದಿರಲಿಲ್ಲ. ಇದೀಗ ಇಂದಿನಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ . ದೇವರ ದರ್ಶನಕ್ಕೆ ದೇವಸ್ಥಾನ ವೆಬ್ ಸೈಟ್ ನಿಂದ ಇ-ಟಿಕೆಟ್ ವ್ಯವಸ್ಥೆ ಕೂಡಾ ಮಾಡಲಾಗಿದೆ.
ದೇವಸ್ಥಾನದಲ್ಲಿ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡಲು ದೇಗುಲದ ವಠಾರದಲ್ಲಿ ಅಲ್ಲಲ್ಲಿ ಬಿಳಿ ಬಣ್ಣದ ಮಾರ್ಕ್  ಹಾಕಲಾಗಿದೆ. ಬೆಳಿಗ್ಗೆ ಗಂಟೆ 7.30 ರಿಂದ ರಾತ್ರಿ 7.30 ರವರೆಗೆ ದೇವರ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದೆ.
ಸ್ಥಳೀಯ ಭಕ್ತರಿಗೆ ಪಾಸ್ ಇಲ್ಲದೆ ಬೆಳಿಗ್ಗೆ 6 ರಿಂದ 7.30ರವರೆಗೆ ದರ್ಶನ ಸಿಗುತ್ತದೆ.
ಅನ್ನಪ್ರಸಾದ ಸೇರಿದಂತೆ ಯಾವುದೇ ಸೇವೆಗಳಿಗೆ  ಸದ್ಯಕ್ಕೆ ಅವಕಾಶ ಇಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

Comments