ಯಲಹಂಕ ಸೇತುವೆಯನ್ನು ಸ್ವಾಮಿ ವಿವೇಕಾನಂದ ಸೇತುವೆ ಎಂದು ತಿಳಿಯುತ್ತೇನೆ; ಯು ಟಿ ಖಾದರ್ಮಂಗಳೂರು; ಬೆಂಗಳೂರಿನ ಯಲಹಂಕ ಸೇತುವೆ ಗೆ  ವೀರಸಾವರ್ಕರ್ ಹೆಸರಿಡುವ ಬಗ್ಗೆ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರೀಯಿಸಿರುವ ಮಾಜಿ ಸಚಿವ ಯು ಟಿ ಖಾದರ್ ಅವರು ಆ ಸೇತುವೆಯನ್ನು ನಾನು ಸ್ವಾಮಿ ವಿವೇಕಾನಂದ ಸೇತುವೆ ಎಂದು ತಿಳಿದುಕೊಳ್ಳುತ್ತೇನೆ ಎಂದಿದ್ದಾರೆ. 
ಸೇತುವೆ ಊರುಗಳನ್ನು ಜೋಡಿಸುವಂತಿರಬೇಕು, ಸೇತುವೆ ವಿಭಜಿಸುವ ಕೆಲಸ ಮಾಡಬಾರದು ಎಂದರು. 
ಇಂದಿರಾಗಾಂಧಿ ಅವರು ಸಾವರ್ಕರ್ ಅವರ ಭಾವಚಿತ್ರದ ಸ್ಟ್ಯಾಂಪ್ ತಂದಿದ್ದರು ಎಂದು ಸ್ಮರಿಸಿದ ಅವರು ಬಿಜೆಪಿಯವರು ಸಾವರ್ಕರ್ ಸ್ಟ್ಯಾಂಪ್ ಬಳಸುವುದಿಲ್ಲ ಎಂದು ಲೇವಡಿ ಮಾಡಿದರು

Comments