ಡಿಕೆಶಿ ಪ್ರತಿಜ್ಞೆ ಸ್ವೀಕಾರಕ್ಕೆ ಅನುಮತಿ ಕೊಡದಿರಲು ಕಾರಣ ಸರಕಾರ ತಿಳಿಸಲಿ;ಖಾದರ್ಮಂಗಳೂರು: ಇಂದು ಡಿ.ಕೆ ಶಿವಕುಮಾರ ಪ್ರತಿಜ್ಞೆ ಸ್ವೀಕಾರದ ಕಾರ್ಯಕ್ರಮ ನಡೆಯಬೇಕಿತ್ತು‌ಆನ್ ಲೈನ್ ನಲ್ಲಿ ಪದಗ್ರಹಣ ಕಾರ್ಯಕ್ರಮ ವೀಕ್ಷಿಸಲು ತಯಾರಿ ನಡೆದಿತ್ತು.ಆದರೆ ರಾಜ್ಯ ಸರಕಾರ ಅನುಮತಿ ನೀಡಿಲ್ಲ.ಅನುಮತಿ ಕೊಡದೆ ಇರಲು ಕಾರಣ ಏನು ಎಂಬುದು ಸರಕಾರ ಜನರಿಗೆ ತಿಳಿಸಬೇಕು ಎಂದು ಮಾಜಿ ಸಚಿವ ಯು ಟಿ ಖಾದರ್ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.ಕೆ.ಶಿವಕುಮಾರ್ ಅವರ ಆಡಳಿತ ಬಿಜೆಯ ನಾಯಕರಿಗೆ ಹೆದರಿಕೆ ಉಂಟಾಗಿದೆ.ಬಿಜೆಪಿ ನಾಯಕರ ಕಾರ್ಯಕ್ರಮ ಮಾಡಲು ಯಾವುದೇ ಕಾನೂನು ಅಡ್ಡಿ ಆಗಲ್ಲಾ.ಆದರೆ ಕಾಂಗ್ರೆಸ್ ನಾಯಕರ ಕಾರ್ಯಕ್ರಮಕ್ಕೆ ಮಾತ್ರ ಕಾನೂನು ಅಡ್ಡಿ ಮಾಡಲಾಗುತ್ತಿದೆ.ಆದರೆ ನಾವು ಧೃತಿಗೆಡುವ ಪ್ರಶ್ನೆ ಇಲ್ಲ.ಮುಂದಿನ‌ ದಿನಗಳಲ್ಲಿ ಇನ್ನೂ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಲು ಮುಂದಾಗುತ್ತೆವೆ.ಕೊರೊನಾ ಕಾಯ್ದೆ ಮುಂದಿಟ್ಟು ಅನುಮತಿ ನೀಡಿಲ್ಲ.ಸರಕಾರ ಇದರಿಂದ ದೊಡ್ಡ ಮಟ್ಟದ ತಪ್ಪನ್ನು ಮಾಡುತ್ತಾ ಇದೆ ಎಂದು ಅವರು  ಹೇಳಿದರು.

Comments