ಬೊಂಡ ತೆಗೆದ ತಂದೆಯನ್ನು ಕೊಂದ ಮಕ್ಕಳು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಲಕ್ಷಣ ಘಟನೆಮಂಗಳೂರು: ಮನೆಯಲ್ಲಿದ್ದ ಬೊಂಡ ಮತ್ತು ತೆಂಗಿನಕಾಯಿಯನ್ನು ತೆಗೆದು ಮಾರಾಟಮಾಡುತ್ತಿದ್ದಾರೆ ಎಂದು ಮಕ್ಕಳಿಬ್ಬರು

ಕತ್ತಿ ಮತ್ತು ಅಡಿಕೆ ಮರದ ಸಲಾಕೆಯಿಂದ ತಂದೆಯನ್ನೇ ಹೊಡೆದು

ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ
ಕರಾಯ ಗ್ರಾಮದ ಮುಗ್ಗದ ಆನೆಪಲ್ಲ ಎಂಬಲ್ಲಿ  ನಡೆದಿದೆ.

ಆದಿತ್ಯವಾರ ರಾತ್ರಿ 11.45  ರಿಂದ 12.15  ರ ಸಮಯದ ಮಧ್ಯೆ ಈ ಘಟನೆ ನಡೆದಿದೆ. ಧರ್ನಪ್ಪ ಪೂಜಾರಿ (65), ಕೊಲೆಯಾದ ವ್ಯಕ್ತಿ. ಇವರನ್ನು ಮಕ್ಕಳಾದ ಮೋನಪ್ಪ ಹಾಗೂ ನವೀನ ಎಂಬುವವರು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ. ಮನೆಯಲ್ಲಿದ್ದ ತೆಂಗಿನ ಮರದ ತೆಂಗಿನಕಾಯಿ, ಬೊಂಡವನ್ನು ತೆಗೆದು ತಂದೆ ಮಾರಾಟ ಮಾಡುತ್ತಿದ್ದರು. ಇದೇ ವಿಚಾರಕ್ಕೆ ತಂದೆ - ಮಕ್ಕಳಿಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ನಿನ್ನೆ ಮಧ್ಯರಾತ್ರಿಯೂ ಇದೇ ವಿಚಾರಕ್ಕೆ ತಂದೆ ಮಕ್ಕಳ ಮಧ್ಯೆ ಜಗಳ ನಡೆದಿದೆ. ಈ ವೇಳೆ ತಂದೆಗೆ ಮಕ್ಕಳು ಕತ್ತಿಯಿಂದ ಕಡಿದಿದ್ದಾರೆ. ಗಂಭೀರ ಗಾಯಗೊಂಡ ಧರ್ನಪ್ಪ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿಗಳಿಬ್ಬರನ್ನು ಉಪ್ಪಿನಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

Comments