ಉಪ್ಪಿನಂಗಡಿಯ ಯೋಧ ಉತ್ತರ ಪ್ರದೇಶದಲ್ಲಿ ಹೃದಯಾಘಾತದಿಂದ ಸಾವು


ಮಂಗಳೂರು: ಉಪ್ಪಿನಂಗಡಿ ಸಮೀಪದ ಬಾರ್ಯ ಗ್ರಾಮದ ಅಲಿಂಗಿರ ಮನೆ ನಿವಾಸಿ ಭಾರತೀಯ ಸೇನಾ ಯೋಧ ಸಂದೇಶ್ ಶೆಟ್ಟಿ(34) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

 ಉತ್ತರ ಪ್ರದೇಶದ ಮಥುರಾದಲ್ಲಿ  ಅವರಿಗೆ ಹೃದಯಾಘಾತವಾಗಿದೆ.

ರಜೆಯಲ್ಲಿ ಊರಿಗೆ ಬಂದವರು ಕಳೆದ ಸೋಮವಾರವಷ್ಟೇ ಮರಳಿ ಕರ್ತವ್ಯಕ್ಕೆ ಹಿಂತಿರುಗಿದ್ದರು. ಮಥುರಾದಲ್ಲಿನ ಕ್ವಾರೆಂಟೈನ್ ಕೇಂದ್ರದಲ್ಲಿ ಕರ್ತವ್ಯಕ್ಕೆ ಸಂದೇಶ್ ನಿಯೋಜನೆಗೊಂಡಿದ್ದು ಅಲ್ಲಿಯೇ ಹೃದಯಾಘಾತಕ್ಕೀಡಾಗಿರುವುದಾಗಿ ತಿಳಿದು ಬಂದಿದೆ. ಇವರು ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

Comments